ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ಅಧಿಕಾರವು ಚುನಾವಣಾ ಆಯೋಗಕ್ಕೆ ಇಲ್ಲ. ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ಸಂಸದ ಮನೀಶ್ ತಿವಾರಿ ಆಗ್ರಹಿಸಿದರು.

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆ ಕುರಿತ ಚರ್ಚೆ ಆರಂಭಿಸಿದ ಅವರು, ‘ಚುನಾವಣೆಗೆ ಮುನ್ನ ಜನರಿಗೆ ನೇರ ನಗದು ವರ್ಗಾವಣೆಗೆ ಅವಕಾಶ ನೀಡಲೇಬಾರದು. ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ನೇರ ನಗದು ವರ್ಗಾವಣೆಗೆ ಆಯೋಗ ಅವಕಾಶ ನೀಡಿದ್ದು ಹೇಗೆ‘ ಎಂದು ಪ್ರಶ್ನಿಸಿದರು.

‘ಯಾವುದೇ ಪಕ್ಷವು ರಾಷ್ಟ್ರೀಯ ಖಜಾನೆ ಅಥವಾ ರಾಜ್ಯ ಖಜಾನೆಯ ಹಣ ಬಳಸಿ ಚುನಾವಣೆಗಳನ್ನು ಗೆಲ್ಲುವುದು ಎಷ್ಟರ ಮಟ್ಟಿಗೆ ಸರಿ. ಇದು ನಮ್ಮ ಪ್ರಜಾಪ್ರಭುತ್ವ ಹಾಗೂ ನಮ್ಮ ದೇಶವನ್ನು ದಿವಾಳಿಯನ್ನಾಗಿಸುತ್ತದೆ‘ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಅಸ್ತಿತ್ವದಲ್ಲಿರುವ ಮೂವರು ಸದಸ್ಯರ ಸಮಿತಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಸೇರಿಸಬೇಕು ಎಂದು ಅವರು ಸಲಹೆ ನೀಡಿದರು.

1947ರಲ್ಲೇ ಮತ ಕಳವು–ಜೈಸ್ವಾಲ್:

ಮೊದಲ ಬಾರಿಗೆ 1947ರಲ್ಲೇ ಮತ ಕಳವು ನಡೆದಿತ್ತು ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಡಾ. ಸಂಜಯ್ ಜೈಸ್ವಾಲ್ ಹೇಳಿದರು.

‘ಆಗ ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೊಂದಿಗೆ ನಿಂತಿತ್ತು. ಆದರೆ, ಜವಾಹರಲಾಲ್ ನೆಹರೂ ಅವರನ್ನು ಪ್ರಧಾನಿಯನ್ನಾಗಿ ಮಾಡಲಾಗಿತ್ತು. ಮತ ಕಳವಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದಿಲ್ಲ‘ ಎಂದು ಅವರು ಹೇಳಿದರು.

‘ಚುನಾವಣೆಗಳಲ್ಲಿ ಸೋತ ಕೂಡಲೇ ವಿಪಕ್ಷದವರು ಎಸ್ಐಆರ್ ಹಾಗೂ ಇವಿಎಂ ಬಗ್ಗೆ ಟೀಕೆ ಮಾಡುತ್ತಾರೆ. ವಾಸ್ತವವೆಂದರೆ, ಚುನಾವಣಾ ಸಮಯದಲ್ಲಿ ಬಿಜೆಪಿಯವರು ತಳಮಟ್ಟದಲ್ಲಿ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ನಾಯಕರು ಪ್ರವಾಸೋದ್ಯಮದಲ್ಲಿ ನಂಬಿಕೆ ಇಟ್ಟು ಚುನಾವಣಾ ಸಮಯದಲ್ಲಿ ವಿದೇಶದಲ್ಲಿ ಸಮಯ ಕಳೆಯುತ್ತಾರೆ. ವಿರೋಧ ಪಕ್ಷಗಳು ತಮ್ಮ ಕಾರ್ಯತಂತ್ರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು‘ ಎಂದು ಅವರು ಕಿವಿಮಾತು ಹೇಳಿದರು.

ಮತ ದರೋಡೆ–ಅಖಿಲೇಶ್:

ದೇಶದಲ್ಲಿ ಮತ ಕಳವು ಅಲ್ಲ, ಮತ ದರೋಡೆ ನಡೆಯುತ್ತಿದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆದರೆ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟರು.

‘ರಾಂಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ಮತದಾನದ ದಿನ ಜನರು ಮನೆಯಿಂದ ಹೊರಗೆ ಬರದಂತೆ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯು ತಡೆಯಿತು. ಆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿತು. ನಾವು ಅಂತಹ ಹಲವು ಅಕ್ರಮಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಒದಗಿಸಿದ್ದೇವೆ. ಆದರೆ, ಆಯೋಗವು ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗವು ನಿಷ್ಪಕ್ಷಪಾತವಾಗಿದ್ದರೆ ಮಾತ್ರ ಸುಧಾರಣೆ ಸಾಧ್ಯ‘ ಎಂದು ಹೇಳಿದರು.

ಎಸ್ಐಆರ್ ಸಂದರ್ಭದಲ್ಲಿ ಕೆಲಸದ ಒತ್ತಡದಿಂದ ಅನೇಕ ಮಂದಿ ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದರು.

‘ಪಶ್ಚಿಮ ಬಂಗಾಳದಲ್ಲಿ 20 ಜನರು ಆತ್ಮಹತ್ಯೆ ಮಾಡಿಕೊಂಡರು. ಐವರು ತೀವ್ರ ಅಸ್ವಸ್ಥರಾದರು. 19 ಜನರು ನಿಧನರಾದರು ಮತ್ತು ಮೂವರು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇದಕ್ಕೆ ಚುನಾವಣಾ ಆಯೋಗವೇ ಹೊಣೆ‘ ಎಂದರು.

‘ಆಯೋಗ ನಡೆಸುತ್ತಿರುವ ಎಸ್ಐಆರ್ ಮತದಾರರ ಹೆಸರನ್ನು ಅಳಿಸುವಿಕೆ ಗುರಿ ಹೊಂದಿದೆಯೇ ಹೊರತು ಅವರನ್ನು ದೃಢೀಕರಿಸುವ ಗುರಿ ಹೊಂದಿಲ್ಲ. ನೀವು ಮತದಾರರ ಹೆಸರನ್ನು ಅಳಿಸಿದರೆ ಚುನಾವಣೆಯ ಅರ್ಥವೇನು. ಈಗ ಪ್ರಧಾನಿ ಮೋದಿ ಅವರು ಚುನಾವಣಾ ಆಯೋಗದ ಮೂಲಕ ಯಾರು ಮತದಾರರಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದಾರೆ‘ ಎಂದು ವಾಗ್ದಾಳಿ ನಡೆಸಿದರು.

Highlights - ಇಂದಿರಾ ಗೆದ್ದಿದ್ದೇ ಮತ ಕಳವಿನಿಂದ: ದುಬೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ರಾಯ್ಬರೇಲಿ ಕ್ಷೇತ್ರದಲ್ಲಿ ಗೆದ್ದಿರುವುದೇ ಮತ ಕಳವಿನಿಂದ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದರು. ‘ಕಾಂಗ್ರೆಸ್ ಪಕ್ಷವು ಭಾರತದ ಸಂವಿಧಾನವನ್ನು ಕಳಂಕಿತಗೊಳಿಸಿದೆ. ಇವಿಎಂ ವ್ಯವಸ್ಥೆ ಜಾರಿಗೆ ಬಂದಿದ್ದೇ ಕಾಂಗ್ರೆಸ್ ಕಾಲದಲ್ಲೇ. ಚುನಾವಣೆಗಳಲ್ಲಿ ಸತತ ಸೋಲಿನ ಹತಾಶೆಯಿಂದ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿದೆ‘ ಎಂದರು. ಆರ್ಎಸ್ಎಸ್ನಿಂದ ಬಂದಿರುವುದಕ್ಕೆ ನಾವೆಲ್ಲ ಹೆಮ್ಮೆ ಪಡುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.