ನವದೆಹಲಿ: ಅಮೆರಿಕದ ಮಹಿಳೆಯೊಬ್ಬರಿಗೆ ₹ 3.3 ಕೋಟಿ ವಂಚಿಸಿದ ಆರೋಪದಲ್ಲಿ ದೆಹಲಿಯ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ದಿಲ್ಶಾದ್ ಗಾರ್ಡನ್ ಪ್ರದೇಶದ ಲಕ್ಷಯ್ ವಿಜ್ (33) ಎಂಬಾತನನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಸೋಮವಾರ ರಾತ್ರಿ ಬಂಧಿಸಲಾಗಿದೆ.

ಆರೋಪಿಯನ್ನು ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ಜುಲೈ 28ರ ವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಲಿಸಾ ರೋಥ್ ಎಂಬವರಿಗೆ ವಂಚಿಸಿದ ಆರೋಪದಲ್ಲಿ ಆತನ ವಿರುದ್ಧ ಸೈಬರ್ ವಂಚನೆ ಆರೋಪದಡಿ ತನಿಖೆ ನಡೆಸಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) 2023ರ ಜುಲೈನಲ್ಲಿ ಎಫ್ಐಆರ್ ದಾಖಲಿಸಿಕೊಂಡಿತ್ತು.

ಸಿಬಿಐ ಎಫ್ಐಆರ್ ಪ್ರಕಾರ, ಲಿಸಾ ಅವರ ಲ್ಯಾಪ್ಟಾಪ್ ಅನ್ನು ಹ್ಯಾಕ್ ಮಾಡಿ, ಅದರ ಮುಖಪುಟಕ್ಕೆ ಸಂಖ್ಯೆಯೊಂದನ್ನು ಕಳುಹಿಸಲಾಗಿತ್ತು. ಅದಕ್ಕೆ ಕರೆ ಮಾಡಿದಾಗ, ವ್ಯಕ್ತಿಯೊಬ್ಬ ತನ್ನನ್ನು ತಾನು ಮೈಕ್ರೋಸಾಫ್ಟ್ನ ಏಜೆಂಟ್ ಎಂದು ಪರಿಚಯಿಸಿಕೊಂಡಿದ್ದ. ಹಾಗೆಯೇ, ಮಹಿಳೆಯ ಕ್ರಿಪ್ಟೊಕರೆನ್ಸಿ ವ್ಯಾಲೆಟ್ಗೆ 4 ಲಕ್ಷ ಡಾಲರ್ (₹ 3.3 ಕೋಟಿಗೂ ಅಧಿಕ) ಹೂಡಿಕೆಯ ಮೊತ್ತವನ್ನು ವರ್ಗಾವಣೆ ಮಾಡುವಂತೆ ಹೇಳಿದ್ದ ಎನ್ನಲಾಗಿದೆ.

ಇದಾದ ಕೆಲವು ದಿನಗಳ ಬಳಿಕ ಆ ಮಹಿಳೆಯು ತಮ್ಮ ಕ್ರಿಪ್ಟೊ ಖಾತೆಗೆ ಲಾಗಿನ್ ಆದಾಗ, ಸಂಪೂರ್ಣ ಹಣ ಖಾಲಿಯಾಗಿತ್ತು. ಸಂತ್ರಸ್ತೆಯು ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ್ದ ಅಧಿಕಾರಿಗಳು ಪ್ರಕರಣದ ವಿವರವನ್ನು ಭಾರತದ ಅಧಿಕಾರಿಗಳಿಗೆ ನೀಡಿದ್ದರು. ಅದರಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು ಎಂದು ಇ.ಡಿ ತಿಳಿಸಿದೆ.

ಈ ಸಂಬಂಧ ಕಳೆದ ವರ್ಷ ಡಿಸೆಂಬರ್ನಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ., ವಿಜ್ ಹಾಗೂ ಮತ್ತೊಬ್ಬನನ್ನು ಪ್ರಕರಣದ ಸೂತ್ರಧಾರಿಗಳು ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.