ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಸ್ವೀಕಾರಾರ್ಹತೆಯಲ್ಲಿ ಒಡಿಶಾವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹಲವು ಸಮೀಕ್ಷೆಗಳು ಇದನ್ನು ದೃಢಪಡಿಸಿವೆ. ಕಳೆದ 10 ವರ್ಷಗಳಲ್ಲಿ ಈ ರಾಜ್ಯಕ್ಕೆ ಕೇಂದ್ರ ಸರ್ಕಾರವು ₹18 ಲಕ್ಷ ಕೋಟಿ ಅನುದಾನ ಮಂಜೂರು ಮಾಡಿದೆ. ಈ ಬಾರಿ ಬಿಜೆಪಿಯು ಇಲ್ಲಿ 15ರಿಂದ 18 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಇಲ್ಲಿ ಪಕ್ಷದ ಮತ ಹಂಚಿಕೆ ಪ್ರಮಾಣವು 2014ರಲ್ಲಿ ಶೇ 22ರಷ್ಟಿತ್ತು. ಅದು 2019ರ ವೇಳೆಗೆ ಶೇ 38ರಷ್ಟಾಗಿತ್ತು. ಈ ಬಾರಿ ಮತ ಹಂಚಿಕೆ ಪ್ರಮಾಣವು ಶೇ45ರಷ್ಟಾಗಲಿದೆ ಎಂದು ರಾಷ್ಟ್ರ ಮಟ್ಟದ ಸಂಸ್ಥೆಗಳು ಭವಿಷ್ಯ ನುಡಿದಿವೆ
ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ADVERTISEMENT
ನನ್ನ ವಿಶ್ವಾಸಾರ್ಹತೆ ಬಗ್ಗೆ ನನಗೆ ಖಚಿತತೆಯಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹತೆಗೆ ಸಾಟಿಯೇ ಇಲ್ಲ. ಸಾಮಾನ್ಯ ಜನರು, ಬಡವರು ಮತ್ತು ರೈತರ ನಡುವೆ ಮೋದಿ ಅವರ ವಿಶ್ವಾಸಾರ್ಹತೆ ಉನ್ನತ ಮಟ್ಟದಲ್ಲಿದೆ. ಅವರಿಂದಾಗಿ ಬಿಹಾರದಲ್ಲಿ ಬೇಗುಸರಾಯ್ ಒಳಗೊಂಡಂತೆ 40 ಲೋಕಸಭಾ ಕ್ಷೇತ್ರಗಳಲ್ಲೂ ಎನ್‌ಡಿಎ ಜಯ ಸಾಧಿಸಲಿದೆ. ಯುಪಿಎ ಅವಧಿಯಲ್ಲಿ ಬೇಗುಸರಾಯ್ ಕ್ಷೇತ್ರವನ್ನು ಕಡೆಗಣಿಸಲಾಗಿತ್ತು.