ಪುಣೆ: ‘ಲೋಕಸಭೆ ಚುನಾವಣೆಯ ಐದು ತಿಂಗಳ ಬಳಿಕ ನಡೆದ ವಿಧಾನಸಭೆ ಚುನಾವಣೆಯ ಹೊತ್ತಿಗೆ ಮಹಾರಾಷ್ಟ್ರದಲ್ಲಿ 39 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ತಳ್ಳಿಹಾಕಿದ್ದಾರೆ.

‘ಜೈಪುರ ಡೈಲಾಗ್ಸ್ ಡೆಕ್ಕನ್ ಸಮಿಟ್, ಪುಣೆ 2025’ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿಧಾನಸಭೆ ಚುನಾವಣೆಗಳಲ್ಲಿ ಯಾವಾಗಲೂ ಮತದಾರರ ಸಂಖ್ಯೆ ಹೆಚ್ಚಾಗುತ್ತದೆ. ಲೋಕಸಭೆ ಚುನಾವಣೆಯ ವೇಳೆ ಹಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಆದ್ದರಿಂದ ಈ ವಿಚಾರವನ್ನು ನಾವು ಚುನಾವಣಾ ಆಯೋಗದ ಮುಂದಿಡಲಾಯಿತು. ಆಯೋಗವು ಅಭಿಯಾನ ಆರಂಭಿಸಿತು’ ಎಂದರು.

‘ಆಯೋಗ ನಡೆಸಿದ ಅಭಿಯಾನದ ಕಾರಣದಿಂದ ಹೊಸ ಮತದಾರರ ಸಂಖ್ಯೆ ಅಧಿಕಗಗೊಂಡಿತು. ರಾಹುಲ್ ಗಾಂಧಿ ಅವರು ತಮ್ಮ ಮುಖದಲ್ಲಿ ಇರುವ ದೂಳನ್ನು ಒರೆಸಿಕೊಳ್ಳುವ ಬದಲು, ಕನ್ನಡಿಯನ್ನೇ ಒರೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ನಮ್ಮ ವ್ಯವಸ್ಥೆಯೊಳಗಿನ ಸಂಸ್ಥೆಗಳ ಮೇಲೆ ರಾಹುಲ್ ಅವರಿಗೆ ನಂಬಿಕೆ ಇಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪನಂಬಿಕೆ ಹುಟ್ಟು ಹಾಕುವ ಯತ್ನವನ್ನು ನಗರ ನಕ್ಸಲರು ಮಾಡುತ್ತಿದ್ದಾರೆ. ರಾಹುಲ್ ಅವರು ನಗರ ನಕ್ಸಲರ ಈ ಕಾರ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ’ ಎಂದು ಆರೋಪಿಸಿದರು.
.ದೆಹಲಿ ಸೋಲಿನ ಭೀತಿಯಿಂದ ಸುಳ್ಳು ಹರಡುತ್ತಿರುವ ರಾಹುಲ್ ಗಾಂಧಿ: ಮಹಾ ಸಿಎಂ ಫಡಣವೀಸ್.ವಾಸ್ತವಾಂಶದೊಂದಿಗೆ ಉತ್ತರ: ರಾಹುಲ್ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.