ಮುಂಬೈ: ಅಹಲ್ಯಾನಗರ ಜಿಲ್ಲೆಯಲ್ಲಿ ₹6.94 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ‘ನಕಲಿ ನಿರ್ಣಯ’ದ (ಜಿ.ಆರ್) ಮೂಲಕ ನೀಡಲಾಗಿದ್ದ ಮಂಜೂರಾತಿ ಮತ್ತು ಟೆಂಡರ್ಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯು ತನಿಖೆ ನಡೆಸುತ್ತಿದೆ.

ಕಳೆದ ನವೆಂಬರ್ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆದಿತ್ತು. ಅದಕ್ಕೂ ಮೊದಲು ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸುವ ಕೆಲವೇ ದಿನಗಳ ಮುನ್ನ ಈ ‘ನಕಲಿ ನಿರ್ಣಯ’ವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಸರಿನಡಿ ಹೊರಡಿಸಲಾಗಿತ್ತು.

ಒಟ್ಟು 45 ಕಾಮಗಾರಿಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಟೆಂಡರ್ಗಳನ್ನು ಕರೆಯಲಾಗಿದ್ದು, ಅದಕ್ಕೆ ಅನುಮೋದನೆ ಕೂಡ ದೊರಕಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುತ್ತಿಗೆದಾರರು ಹಣದ ಪಾವತಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆಗ, ಆ ದಿನಾಂಕದಲ್ಲಿ ಯಾವುದೇ ‘ಜಿ.ಆರ್’ ಹೊರಡಿಸಿರಲಿಲ್ಲ ಎನ್ನುವುದು ತಿಳಿದುಬಂದಿದೆ. ಇದು ವಂಚನೆಯ ಪ್ರಕರಣ ಎಂದು ಗೊತ್ತಾಯಿತು. ಕೂಡಲೇ ಗುತ್ತಿಗೆದಾರರಿಗೆ ಕಾಮಗಾರಿಯ ಹಣವನ್ನು ಮಂಜೂರು ಮಾಡದೆ ತಡೆಹಿಡಿಯಲಾಯಿತು. ಪ್ರಕರಣದ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.