ಚಂಡೀಗಢ: ಹರಿಯಾಣದ ವ್ಯಕ್ತಿಯೊಬ್ಬರು ಫ್ಯಾನ್ಸಿ ವಾಹನ ಸಂಖ್ಯೆ ಪಡೆಯಲು ಸರ್ಕಾರ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ₹1.17 ಕೋಟಿ ಬಿಡ್ ಮಾಡಿ ಗೆದ್ದಿದ್ದರು. ಆದರೆ ಗಡುವಿನೊಳಗೆ ಹಣ ಪಾವತಿಸಲು ವಿಫಲವಾಗಿದ್ದು, ಸರ್ಕಾರ ತನಿಖೆಗೆ ಆದೇಶಿಸಿದೆ.

ಸದ್ಯ ಈ ವ್ಯಕ್ತಿಯ ಆದಾಯದ ಪರಿಶೀಲನೆ ನಡೆಸಲು ಹರಿಯಾಣ ಸಾರಿಗೆ ಸಚಿವ ಅನಿಲ್ ವಿಜ್ ಬುಧವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಹಿಸಾರ್ನಲ್ಲಿ ವಾಸಿಸುವ ಆ ವ್ಯಕ್ತಿ ಕಳೆದ ವಾರ HR-88-B-8888 ನೋಂದಣಿ ಸಂಖ್ಯೆಗೆ ಅತಿ ಹೆಚ್ಚು ಬಿಡ್ ಮಾಡಿದ್ದರು. ಈ ಮೂಲಕ ಬಿಡ್ ಗೆದ್ದು ನಂಬರ್ ಪ್ಲೇಟ್ ಗೆದ್ದಿದ್ದರು.

ಆನ್ಲೈನ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆರಂಭದಲ್ಲಿ ₹1,000 ಶುಲ್ಕ ಮತ್ತು ಭದ್ರತಾ ಠೇವಣಿಯಾಗಿ ₹10,000 ಪಾವತಿಸಿದ್ದರು. ನಂತರ ಸೋಮವಾರದೊಳಗೆ ಪೂರ್ತಿ ಹಣ ಪಾವತಿಸಬೇಕಿತ್ತು.

‘ಬಿಡ್ ಗೆದ್ದ ವ್ಯಕ್ತಿ ನಿಜವಾಗಿಯೂ ₹1.17 ಕೋಟಿ ಹಣವನ್ನು ನೀಡುವ ಸಾಮರ್ಥ್ಯ ಹೊಂದಿದ್ದಾನೆಯೇ ಎನ್ನುವುದನ್ನು ಪರಿಶೀಲಿಸಲು ಆದೇಶಿಸಿದ್ದೇನೆ. ಭದ್ರತಾ ಠೇವಣಿಯಾಗಿ ಇರಿಸಿಕೊಂಡಿರುವ ₹10 ಸಾವಿರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಫ್ಯಾನ್ಸಿ ವಾಹನ ಸಂಖ್ಯೆಯನ್ನು ಮರುಹರಾಜು ಮಾಡಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.

ಹರಿಯಾಣದಲ್ಲಿ ಫ್ಯಾನ್ಸಿ ನಂಬರ್ ಅನ್ನು ಹರಾಜಿನ ಮೂಲಕ ಮಾತ್ರ ಮಾರಾಟ ಮಾಡಲಾಗುವುದು. ಈ ರೀತಿಯ ಫ್ಯಾನ್ಸಿ ನಂಬರ್ಗಳನ್ನು ಜನ ಭಾರಿ ಮೊತ್ತ ನೀಡಿ ಖರೀದಿಸುತ್ತಾರೆ. ಇದರಿಂದ ಬಂದ ಹಣ ರಾಜ್ಯದ ಆದಾಯಕ್ಕೆ ನೆರವಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.