ಕೋಟಾ: ಕಸ ಸಾಗಿಸುವ ವಾಹನ ಗುದ್ದಿಸಿ, ಇಬ್ಬರು ಸಹೋದರರು ಸೇರಿದಂತೆ ಐವರನ್ನು ಹತ್ಯೆ ಮಾಡಿರುವ ಪ್ರಕರಣ ಝಲಾವರ್ ಜಿಲ್ಲೆಯ ಪಗಾರಿಯಾ ಪ್ರದೇಶದಲ್ಲಿ ವರದಿಯಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶನಿವಾರ ರಾತ್ರಿ ಈ ಕೃತ್ಯ ನಡೆದಿದೆ. ಆರೋಪಿಗಳು ಮತ್ತು ಮೃತರ ನಡುವೆ ಜಗಳವಾಗಿರಬಹುದು. ಕೃತ್ಯದ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಭರತ್ ಸಿಂಗ್ (22) ಮತ್ತು ಧೀರಜ್ ಸಿಂಗ್ (20) ಮೃತ ಸಹೋದರರು. ಉಳಿದಂತೆ ತುಫಾನ್ ಸಿಂಗ್ (33), ಗೋವರ್ಧನ್ ಸಿಂಗ್ (28) ಮತ್ತು ಬಾಲು ಸಿಂಗ್ (20) ಮೃತಪಟ್ಟಿದ್ದಾರೆ. ಇವರೆಲ್ಲ ಬಿನ್ನಾಯಗ ಗ್ರಾಮದವರು.

ಜಗಳಕ್ಕೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಪಗಾರಿಯಾ ಠಾಣಾಧಿಕಾರಿ ವಿಜೇಂದ್ರ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.