ಮುಂಬೈ: ದಕ್ಷಿಣ ಮುಂಬೈನ ಪಾರ್ಸಿ ಜಿಮ್ಖಾನಾಗೆ ಬ್ರಿಟನ್ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇಂದು (ಭಾನುವಾರ) ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಿಷಿ ಸುನಕ್ ಅವರು ಟೆನಿಸ್ ಬಾಲ್ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.

ಬಳಿಕ ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುನಕ್, 'ಟೆನಿಸ್ ಬಾಲ್ ಕ್ರಿಕೆಟ್ ಆಡದೇ ಮುಂಬೈ ಪ್ರವಾಸ ಪೂರ್ಣಗೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

'ನನ್ನನ್ನು ಹೆಚ್ಚು ಬಾರಿ ಔಟ್ ಮಾಡಲು ಸಾಧ್ಯವಾಗಿಲ್ಲ' ಎಂದು ವರದಿಗಾರರಿಗೆ ಸುನಕ್ ತಿಳಿಸಿದ್ದಾರೆ.

'ನಿಮ್ಮೊಂದಿಗೆ ಪಾರ್ಸಿ ಜಿಮ್ಖಾನಾ ಕ್ಲಬ್ನ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರುವುದು ಖುಷಿ ಕೊಟ್ಟಿದೆ. ಎಂತಹ ಅಮೋಘ ಚರಿತ್ರೆ. ಇನ್ನು ಮುಂದೆಯೂ ಇಂತಹ ಭೇಟಿಯನ್ನು ಎದುರು ನೋಡುತ್ತಿದ್ದೇನೆ' ಎಂದು ರಿಷಿ ಸುನಕ್ ತಿಳಿಸಿದ್ದಾರೆ.

1885ರ ಫೆಬ್ರುವರಿ 25ರಂದು ಪಾರ್ಸಿ ಜಿಮ್ಖಾನಾವನ್ನು ಸ್ಥಾಪಿಸಲಾಗಿತ್ತು. ಜೆಮ್ಶೆಡ್ಜಿ ಟಾಟಾ ಸ್ಥಾಪಕ ಅಧ್ಯಕ್ಷರಾಗಿದ್ದರು.
.ಬೆಂಗಳೂರು: ಜಯನಗರದ ಕೆಫೆಯಲ್ಲಿ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ.ಸಂಸದರ ವಲಸೆ: ಆಪ್ತರ ಜತೆ ಕಾಲ ಕಳೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.