ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ವಲಸೆ: ಆಪ್ತರ ಜತೆ ಕಾಲ ಕಳೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್

Published 25 ಮೇ 2024, 13:49 IST
Last Updated 25 ಮೇ 2024, 13:49 IST
ಅಕ್ಷರ ಗಾತ್ರ

ಲಂಡನ್: ಸಾರ್ವತ್ರಿಕ ಚುನಾವಣೆ (ಜುಲೈ 4) ಘೋಷಣೆಯಾದ ಬಳಿಕ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಅವರು ಶನಿವಾರ ತಮ್ಮ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದು, ಆಪ್ತರೊಂದಿಗೆ ಚರ್ಚಿಸಿದರು.

ಕನ್ಸರ್ವೇಟಿವ್ ಪಕ್ಷದ ಬಹಳಷ್ಟು ಸಂಖ್ಯೆಯ ಹಿರಿಯ ಸಂಸದರು ಪಕ್ಷ ತೊರೆಯುತ್ತಿರುವುದರ ಮಧ್ಯೆಯೇ, ಸುನಕ್‌ ಅವರು ತಮ್ಮ ಸಹಾಯಕರು ಹಾಗೂ ಕುಟುಂಬದವರೊಂದಿಗೆ ಸಮಯ ಕಳೆದರು.

ಕ್ಯಾಬಿನೆಟ್‌ ಸಚಿವರಾದ ಮೈಕೆಲ್ ಗೋವ್, ಆಂಡ್ರಿಯಾ ಲೀಡ್ಸಮ್ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರ ಪ್ರಕಟಿಸಿದ್ದು, ಸ್ಪರ್ಧೆಯಿಂದ ದೂರ ಸರಿದ ಪಕ್ಷದ ಸಂಸದರ ಸಂಖ್ಯೆ 78ಕ್ಕೇರಿದೆ.

ಸುನಕ್‌ ಅವರ ಈ ನಡೆಗೆ ವಿರೋಧ ಪಕ್ಷಗಳು ಹಾಗೂ ರಾಜಕೀಯ ವಿಶ್ಲೇಷಕರು ಪ್ರತಿಕ್ರಿಯಿಸಿದ್ದಾರೆ. 

‘ಚುನಾವಣಾ ಪ್ರಚಾರ ಕಾರ್ಯದ ಮೊದಲ ವಾರಂತ್ಯವನ್ನು ಸಾಮಾನ್ಯವಾಗಿ ಪ್ರಧಾನಿಗಳು ಈ ರೀತಿ ತಮ್ಮ ಆಪ್ತೇಷ್ಟರೊಂದಿಗೆ ಮಾತನಾಡುತ್ತಾ ಕಳೆಯುವುದಿಲ್ಲ’ ಎಂದು ಒಂದು ಮೂಲ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ಸಂಸದೆ ಸ್ಟೆಲ್ಲಾ ಕ್ರೀಸಿ,‘ಸುನಕ್‌ ಅವರಿಗೆ ಈಗ ವಿಶ್ರಾಂತಿ ಬೇಕಾಗಿದೆ. ಬ್ರಿಟನ್‌ಗೆ ಬೇರೆ ಸರ್ಕಾರದ ಅಗತ್ಯ ಇದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT