ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಅಜಯ್‌: ಇಸ್ರೇಲ್‌ನಿಂದ 4ನೇ ವಿಮಾನದಲ್ಲಿ ದೆಹಲಿಗೆ ಬಂದ 274 ಭಾರತೀಯರು

Published 15 ಅಕ್ಟೋಬರ್ 2023, 3:40 IST
Last Updated 15 ಅಕ್ಟೋಬರ್ 2023, 3:40 IST
ಅಕ್ಷರ ಗಾತ್ರ

ನವದೆಹಲಿ: ಆಪರೇಷನ್ ಅಜಯ್‌ ಅಡಿಯಲ್ಲಿ ಯುದ್ಧ ಪೀಡಿತ ಇಸ್ರೇಲ್‌ನಿಂದ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ದೆಹಲಿ ತಲುಪಿದೆ. ಅವರನ್ನು ಕೇಂದ್ರ ಸಚಿವ ವಿ.ಕೆ ಸಿಂಗ್ ಬರಮಾಡಿಕೊಂಡರು.

ಟೆಲ್‌ ಅವೀವ್‌ ವಿಮಾನ ನಿಲ್ದಾಣದಿಂದ ಶನಿವಾರ ರಾತ್ರಿ ಎರಡು ವಿಮಾನಗಳು ಹೊರಟಿದ್ದವು. 

3ನೇ ವಿಮಾನದಲ್ಲಿ ಶನಿವಾರ ಹೊರಟ 197 ಭಾರತೀಯರು ಕೂಡ ಇಂದು ಬೆಳಿಗ್ಗೆ ದೆಹಲಿ ತಲುಪಿದ್ದಾರೆ.

ಅವರನ್ನು ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಈ ಮೂಲಕ ಇಲ್ಲಿಯವರೆಗೆ, ಒಟ್ಟು 918 ಭಾರತೀಯ ಪ್ರಜೆಗಳನ್ನು ಇಸ್ರೇಲ್‌ನಿಂದ ಭಾರತಕ್ಕೆ ಕರೆತರಲಾಗಿದೆ.

ಅಕ್ಟೋಬರ್ 7 ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ ಭೀಕರ ದಾಳಿಯ ನಂತರ ಅಕ್ಟೋಬರ್ 12 ರಂದು 'ಆಪರೇಷನ್ ಅಜಯ್' ಅನ್ನು ಪ್ರಾರಂಭಿಸಲಾಯಿತು. ಇದರ ಅಡಿಯಲ್ಲಿ 18,000 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT