ಹೈದರಾಬಾದ್: ರಾಜ್ಯದಲ್ಲಿ 'ಗಾಂಧಿ ಸರೋವರ ಯೋಜನೆ'ಯನ್ನು ಅನುಷ್ಠಾನ ಮಾಡಲು 98.20 ಎಕರೆ ರಕ್ಷಣಾ ಭೂಮಿಯನ್ನು ಕೋರಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾದ ರೆಡ್ಡಿ ಅವರು ಹೈದರಾಬಾದ್ನಲ್ಲಿರುವ ಮೂಸಿ ಹಾಗೂ ಎಸಿ ನದಿಗಳ ಸಂಗಮದಲ್ಲಿ ಗಾಂಧಿ ಸರ್ಕಲ್ ಆಫ್ ಯೂನಿಟಿಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆಯನ್ನು ಹಾಕಿಕೊಂಡಿದೆ. ಈ ಯೋಜನೆಯು ದೇಶದ ಏಕತೆಯ ಲಾಂಛನವಾಗಲಿದೆ. ಮಹಾತ್ಮ ಗಾಂಧಿಯವರ ಕಾಲಾತೀತ ಆದರ್ಶಗಳಿಗೆ ಇದು ಮಾದರಿಯಾಗಲಿದೆ ಎಂದು ಹೇಳಿದ್ದಾರೆ.

ಗಾಂಧಿ ಸರೋವರ ಯೋಜನೆಯಲ್ಲಿ ಗಾಂಧೀಜಿಯವರ ಸ್ಮಾರಕದ ಜೊತೆಗೆ, ಧ್ಯಾನ ಮಂದಿರ ಹಾಗೂ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಯಂಗ್ ಇಂಡಿಯಾ ಇಂಟಿಗ್ರೇಟೆಡ್ ರೆಸಿಡೆನ್ಶಿಯಲ್ ಸ್ಕೂಲ್ಸ್ ನಿರ್ಮಾಣಕ್ಕೆ ಹಣವನ್ನು ಸಂಗ್ರಹಿಸಲು ವಿಶೇಷ ನಿಗಮವನ್ನು ಸ್ಥಾಪಿಸಲು ನಿರ್ಮಲಾ ಸೀತಾರಾಮನ್ ಅವರಿಗೆ ಬೇಡಿಕೆಯಿಟ್ಟಿದ್ದಾರೆ. ಹೈದರಾಬಾದ್ನಿಂದ ಮಚಲಿಪಟ್ನಂ ಬಂದರಿಗೆ 12 ಪಥಗಳ ಹಸಿರು ರಸ್ತೆಯನ್ನು ಮಂಜೂರು ಮಾಡುವಂತೆ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.