ಮುಂಬೈ: 11 ದಿನಗಳ ಅದ್ದೂರಿ ಗಣೇಶೋತ್ಸವಕ್ಕೆ ಮಹಾರಾಷ್ಟ್ರದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಪೆಂಡಾಲ್ಗಳಲ್ಲಿ ಮತ್ತು ಮನೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಲು ಮೂರ್ತಿಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ರಸ್ತೆಗಳು ಜನನಿಬಿಡವಾಗಿವೆ. ರಾಜ್ಯದ ಪ್ರಮುಖ ನಗರಗಳಲ್ಲಿ ಈಗಾಗಲೇ ಹಬ್ಬದ ಸಡಗರ ಮನೆ ಮಾಡಿದೆ.

ಗಣೇಶೋತ್ಸವವನ್ನು ‘ನಾಡ ಹಬ್ಬ’ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದ ಬಳಿಕ ನಡೆಯುತ್ತಿರುವ ಮೊದಲ ಉತ್ಸವ ಇದಾಗಿದೆ. ಈ ಬಾರಿ ಆಗಸ್ಟ್ 27ರಿಂದ ಸೆಪ್ಟೆಂಬರ್6ರ ವರೆಗೆ ಗಣೇಶೋತ್ಸವ ನಡೆಯಲಿದೆ.

ಮುಂಬೈ, ಪುಣೆ, ನಾಸಿಕ್, ಕೊಂಕಣ ಕರಾವಳಿ ಪ್ರದೇಶ ಹಾಗೂ ಮಹಾರಾಷ್ಟ್ರದ ಇತರೆ ಪ್ರದೇಶಗಳಲ್ಲಿ ರಸ್ತೆಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಇಲ್ಲಿ ನಡೆಯುವ ಅದ್ದೂರಿ ಆಚರಣೆಗಳನ್ನು ಕಣ್ತುಂಬಿಕೊಳ್ಳಲು ಜನರು ಕಾತುರರಾಗಿರುವುದಾಗಿ ಹೇಳಿದ್ದಾರೆ.

ಗಿರಿಗಾಂವ್ನ ಕೇಶವ್ ಜಿ ನಾಯಕ್ ಚಾವಲ್ನಲ್ಲಿ ಫೋರ್ಟ್ ಛಾ ಇಚ್ಚಾಪೂರ್ತಿ ಗಣೇಶ, ಲಾಲ್ಬಾಗ್ನ ಗಣೇಶ್ ಗಲ್ಲಿಯಲ್ಲಿ ಮುಂಬೈ ಕಾ ರಾಜಾ, ಕಿಂಗ್ಸ್ ಸರ್ಕಲ್ನಲ್ಲಿ ಜಿಎಸ್ಬಿ ಸೇವಾ ಮಂಡಲ್ ಗಣಪತಿ, ವಡಾಲಾದಲ್ಲಿ ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಚಿಂಚಪೋಕಲಿಯಲ್ಲಿ ಚಿಂತಾಮಣಿ ಗಣೇಶ ಪೆಂಡಾಲ್ಗಳನ್ನು ನಿರ್ಮಿಸಲಾಗಿದ್ದು, ಇವು ಮುಂಬೈನ 5 ಪ್ರಮುಖ ಪೆಂಡಾಲ್ಗಳೂ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.