ವಾಷಿಂಗ್ಟನ್/ಜೆರುಸಲೇಂ: ಗಾಜಾದಲ್ಲಿ ಯುದ್ಧ ಕೊನೆಗೊಳಿಸುವ ಸಂಬಂಧ ರೂಪಿಸಿರುವ ಶಾಂತಿ ಒಪ್ಪಂದಕ್ಕೆ ಒಪ್ಪಿಗೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಆದರೆ, ಈ ಪ್ರಸ್ತಾವವನ್ನು ಹಮಾಸ್ ಒಪ್ಪಿಕೊಂಡಿದೆಯೇ ಎಂಬುದು ದೃಢಪಟ್ಟಿಲ್ಲ.

ಪ್ಯಾಲೆಸ್ಟೀನ್ನ ಗಾಜಾ ಪಟ್ಟಿಯಲ್ಲಿ ಇಸ್ರೇಲ್– ಹಮಾಸ್ ನಡುವಿನ ಸಂಘರ್ಷ ಕೊನೆಗೊಳಿಸುವುದಕ್ಕಾಗಿ 20 ಅಂಶಗಳ ಯೋಜನೆಯನ್ನು ಟ್ರಂಪ್ ಮಂಡಿಸಿದ್ದಾರೆ. ಇದರ ಅನ್ವಯ, ಯುದ್ಧದಿಂದ ಜರ್ಜರಿತರಾಗಿರುವ ಪ್ಯಾಲೆಸ್ಟೀನ್ನ ಪ್ರದೇಶಕ್ಕೆ ತಾತ್ಕಾಲಿಕ ಆಡಳಿತ ಮಂಡಳಿ ಸ್ಥಾಪಿಸಿ, ಇದರ ನೇತೃತ್ವವನ್ನು ಡೊನಾಲ್ಡ್ ಟ್ರಂಪ್ ಅವರೇ ವಹಿಸಿಕೊಳ್ಳಲಿದ್ದಾರೆ. ಈ ಮಂಡಳಿಯಲ್ಲಿ ಬ್ರಿಟನ್ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಕೂಡ ಇರಲಿದ್ದಾರೆ.

‘ಎರಡು ಕಡೆಯವರೂ ಒಪ್ಪಿಗೆ ಸೂಚಿಸಿದರೆ, ಯುದ್ಧಪೀಡಿತ ಗಾಜಾದಿಂದ ಯಾವ ನಾಗರಿಕರು ಅಲ್ಲಿಂದ ಬಿಟ್ಟು ತೆರಳಬೇಕಿಲ್ಲ. ಹಮಾಸ್ ವಶದಲ್ಲಿರುವ ಬಾಕಿ ಉಳಿದ ಒತ್ತೆಯಾಳುಗಳನ್ನು 72 ಗಂಟೆಗಳ ಒಳಗಾಗಿ ಬಿಡುಗಡೆಗೊಳಿಸಬೇಕು ಎಂಬ ಪ್ರಸ್ತಾವವೂ ಒಳಗೊಂಡಿದೆ. ಈಗ ಮುಂದಿಟ್ಟಿರುವ ಶಾಂತಿ ಒಪ್ಪಂದಕ್ಕೆ ಹಮಾಸ್ ಒಪ್ಪಿಗೆ ಸೂಚಿಸದಿದ್ದರೆ, ಹಮಾಸ್ ಬಂಡುಕೋರ ಸಂಘಟನೆಯನ್ನು ಮಣಿಸಲು ಇಸ್ರೇಲ್ಗೆ ಅಮೆರಿಕವು ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ವಿಸ್ತೃತ ಯೋಜನೆಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಟ್ರಂಪ್, ‘ಶಾಂತಿ ಸ್ಥಾಪನೆ ಕುರಿತ ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಇದಕ್ಕೆ ಹಮಾಸ್ ಒಪ್ಪಿಗೆ ಸಿಗಬೇಕು’ ಎಂದು ತಿಳಿಸಿದರು.

‘ಒಂದೊಮ್ಮೆ ಹಮಾಸ್ ಪ್ರಸ್ತಾವ ತಿರಸ್ಕರಿಸಿದರೆ ಅಥವಾ ಒಪ್ಪಿಗೆ ಸೂಚಿಸಿದರೆ, ಇಸ್ರೇಲ್ ತನ್ನ ಕೆಲಸವನ್ನು ಪೂರ್ಣಗೊಳಿಸಲಿದೆ. ಅದು ಸುಲಭದ ಮಾರ್ಗವೇ ಇರಬಹುದು ಅಥವಾ ಕಷ್ಟದ ಮಾರ್ಗವೇ ಇರಬಹುದು. ಅದನ್ನು ನಾವು ಮುಗಿಸುತ್ತೇವೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದರು.

‘ಪ್ಯಾಲೆಸ್ಟೀನಿಯನ್ನರು ತಮ್ಮ ಹಣೆಬರಹ ನಿರ್ಧರಿಸಿಕೊಳ್ಳಲು ಈ ಪ್ರಸ್ತಾವ ಒಪ್ಪಬೇಕು’ ಎಂದು ಟ್ರಂಪ್ ಹೇಳಿದರು.

ಮುಂದೇನು?:

ಕತಾರ್ನ ಪ್ರಧಾನಿ ಹಾಗೂ ಈಜಿಪ್ಟ್ನ ಗುಪ್ತಚರ ವಿಭಾಗದ ಮುಖ್ಯಸ್ಥರು, ಟ್ರಂಪ್ ಮಂದಿಟ್ಟಿರುವ ಪ್ರಸ್ತಾವವನ್ನು ಹಮಾಸ್ ಸಂಧಾನಕಾರರಿಗೆ ತಿಳಿಸಲಿದ್ದಾರೆ.

ಗಾಜಾದ ಆಡಳಿತ ವ್ಯವಸ್ಥೆಯಿಂದ ಹಿಂದೆ ಸರಿಯುವ ಪ್ರಸ್ತಾವಕ್ಕೆ ಹಮಾಸ್ ಈ ಹಿಂದೆಯೇ ಒಪ್ಪಿಗೆ ಸೂಚಿಸಿತ್ತು. ಆದರೆ, ಸಂಪೂರ್ಣ ನಿಶ್ಶಸ್ತ್ರೀಕರಣಗೊಳಿಸಬೇಕು ಎಂಬ ನೆತನ್ಯಾಹು ಬೇಡಿಕೆಗೆ ಒಪ್ಪಿಗೆ ಸೂಚಿಸಿಲ್ಲ.

ಟ್ರಂಪ್ ಮುಂದಿಟ್ಟಿರುವ ಯೋಜನೆಗಳನ್ನು ಪ್ಯಾಲೆಸ್ಟೀನ್ ಸರ್ಕಾರವು ಸ್ವಾಗತಿಸಿದೆ. ಸುಧಾರಣೆಗಳು ಆದಷ್ಟು ಬೇಗ ಜಾರಿಗೊಂಡು, ಗಾಜಾವನ್ನು ಮರಳಿ ಸರ್ಕಾರದ ಹಿಡಿತಕ್ಕೆ ನೀಡಬೇಕು ಎಂದು ಆಗ್ರಹಿಸಿದೆ.

‘ಬಹುತ್ವ ಹಾಗೂ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಬದ್ಧರಾಗಿರುವ ಸೇನಾ ರಹಿತ ಆಧುನಿಕ, ಪ್ರಜಾತಾಂತ್ರಿಕ ಪ್ಯಾಲೆಸ್ಟೀನ್ ಸರ್ಕಾರವನ್ನು ಎದುರು ನೋಡುತ್ತಿದ್ದೇವೆ’ ಎಂದು ಪ್ಯಾಲೆಸ್ಟೀನ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ನಿರಂತರ ಸುಧಾರಣೆಗಳು, ಹೊಸ ಚುನಾವಣೆ ಹಾಗೂ ಪಠ್ಯಪುಸ್ತಕಗಳಲ್ಲಿ ಸುಧಾರಣೆ ತರುವ ದಿಸೆಯಲ್ಲಿ ಕಾರ್ಯೋನ್ಮುಖವಾಗುವೆವು’ ಎಂದು ಭರವಸೆ ನೀಡಿದೆ.

‘ಚರ್ಚಿಸಿ ನಿರ್ಧಾರ’: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಪ್ರತಿಕ್ರಿಯಿಸುವ ಮೊದಲು, ತನ್ನ ಗುಂಪಿನೊಳಗೆ ಮತ್ತು ಪ್ಯಾಲೆಸ್ಟೀನಿಯನ್ ಬಣಗಳೊಂದಿಗೆ ಚರ್ಚಿಸಲಾಗುವುದು’ ಎಂದು ಹಮಾಸ್ ಮಂಗಳವಾರ ಹೇಳಿದೆ.

ಒಪ್ಪಂದದ ಪ್ರಮುಖಾಂಶಗಳು

* ಹಮಾಸ್ ವಶದಲ್ಲಿರುವ ಎಲ್ಲ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ

* ಶಸ್ತ್ರ ತೊರೆದರೆ, ಹಮಾಸ್ ಮುಖಂಡರಿಗೆ ಕ್ಷಮಾದಾನ

* ಗಾಜಾ ತೊರೆಯಲು ಹಮಾಸ್ ಮುಂದಾದರೆ, ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲು ವ್ಯವಸ್ಥೆ

* ಶಾಂತಿಗೆ ಒಪ್ಪಂದ ಒಪ್ಪದಿದ್ದರೆ, ಹಮಾಸ್ ಸಂಪೂರ್ಣ ನಾಶಕ್ಕೆ ಇಸ್ರೇಲ್ಗೆ ಸಹಕಾರ

Quote - ಗಾಜಾ ಸಂಘರ್ಷ ಕೊನೆಗೊಳಿಸಲು ಟ್ರಂಪ್ ಮುಂದಿಟ್ಟಿರುವ ಶಾಂತಿ ಪ್ರಸ್ತಾವದಿಂದ ದೀರ್ಘಾವಧಿ ಶಾಂತಿ ಸಾಧ್ಯ. ಜೊತೆಗೆ ಪ್ಯಾಲೆಸ್ಟೀನ್– ಇಸ್ರೇಲ್ನ ಜನರಿಗೆ ಭದ್ರತೆ ಹಾಗೂ ಅಭಿವೃದ್ಧಿ ದೊರೆಯಲಿದೆ ನರೇಂದ್ರ ಮೋದಿ ಪ್ರಧಾನಿ

ಕತಾರ್ ಕ್ಷಮೆಯಾಚಿಸಿದ ನೆತನ್ಯಾಹು

ಹಮಾಸ್ ನಾಯಕರನ್ನು ಗುರಿಯಾಗಿಸಿ ದೋಹಾದ ಮೇಲೆ ನಡೆಸಿದ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಕತಾರ್ನ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕ ತಿಳಿಸಿದೆ. ‘ನೆತನ್ಯಾಹು ಅವರು ಶ್ವೇತಭವನದಿಂದ ದೂರವಾಣಿ ಕರೆ ಮಾಡಿ ಕತಾರ್ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರ ಕ್ಷಮೆಯಾಚಿಸಿದರು. ದಾಳಿಯಲ್ಲಿ ಕತಾರ್ನ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ದಾಳಿ ನಡೆಸುವುದಿಲ್ಲ ಎಂದು ಮಾತುಕೊಟ್ಟರು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಬ್ ರಾಷ್ಟ್ರಗಳ ಸ್ವಾಗತ

ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಹಾಗೂ ತೊಂದರೆಗೊಳಗಾದ ಪ್ರದೇಶದಲ್ಲಿ ಶಾಂತಿಯನ್ನು ಪುನರ್ಸ್ಥಾಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ಅರಬ್ನ ಎಂಟು ಮತ್ತು ಇಸ್ಲಾಂನ ಬಹುತೇಕ ರಾಷ್ಟ್ರಗಳು ಮಂಗಳವಾರ ಸ್ವಾಗತಿಸಿವೆ. ಶಾಂತಿ ಯೋಜನೆಯನ್ನು ಜೋರ್ಡನ್ ಕತಾರ್ ಯುಎಇ ಇಂಡೊನೇಷ್ಯಾ ಪಾಕಿಸ್ತಾನ ಟರ್ಕಿ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ವಿದೇಶಾಂಗ ಸಚಿವರು ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.