ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ | ಪಕ್ಷಾಂತರ ಭೀತಿ: ಕಾಂಗ್ರೆಸ್‌ನ ಐವರು ಶಾಸಕರು ಅಜ್ಞಾತ ಸ್ಥಳಕ್ಕೆ

Last Updated 11 ಜುಲೈ 2022, 5:09 IST
ಅಕ್ಷರ ಗಾತ್ರ

ಪಣಜಿ: ಗೋವಾದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿದೆ. ಪಕ್ಷಾಂತರಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಪಕ್ಷದ ಐವರು ಶಾಸಕರನ್ನು ಕಾಂಗ್ರೆಸ್ ಅಜ್ಞಾತ ಸ್ಥಳಕ್ಕೆ ಕಳುಹಿಸಿದೆ.

ಈ ನಡುವೆ ಕಾಂಗ್ರೆಸ್‌ನ ಇನ್ನೈದು ಮಂದಿ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಗೋವಾ ವಿಧಾನಸಭೆ ಅಧಿವೇಶನ ಇಂದು ಆರಂಭವಾಗಲಿರುವಂತೆಯೇ ಈ ಎಲ್ಲ ಕುತೂಹಲಕಾರಿ ಬೆಳವಣಿಗೆಗಳು ಘಟಿಸಿವೆ.

ಇದನ್ನೂ ಓದಿ:

ಪಕ್ಷದ ವಿರುದ್ಧ ಷಡ್ಯಂತ್ರ ಆರೋಪದಡಿ ಕಾಂಗ್ರೆಸ್ ಪಕ್ಷವು, ಮೈಕಲ್ ಲೋಬೊ ಅವರನ್ನು ಗೋವಾ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಭಾನುವಾರ ವಜಾಗೊಳಿಸಿತ್ತು. ಹಾಗಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಘೋಷಣೆ ಕೂಡ ಇಂದೇ ಆಗಲಿದೆ ಎಂದು ಗೋವಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಮಿತ್ ಪಾಟ್ಕರ್ ತಿಳಿಸಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 11 ಶಾಸಕರ ಪೈಕಿ ಐವರು ಪಕ್ಷದೊಂದಿಗಿದ್ದರೆ ಇನ್ನೈದು ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ.

ಪಕ್ಷಾಂತರವನ್ನು ತಡೆಯಲು ತಮ್ಮ ಪಕ್ಷದ ಐದು ಮಂದಿ ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅವರೆಲ್ಲರು ಸದನದ ಕಲಾಪದಲ್ಲಿ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ನ ನಾಯಕರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಐವರು ಶಾಸಕರಾದ ಮೈಕಲ್ ಲೋಬೊ, ದಿಂಗಬರ ಕಾಮತ್, ಕೇದಾರ್ ನಾಯ್ಕ್, ರಾಜೇಶ್ ಫಾಲ್‌ದೇಸಾಯಿ ಹಾಗೂ ಡೆಲಿಲಾ ಲೋಬೊ ಸಂಪರ್ಕಕ್ಕೆ ಸಿಗದೇ ಇರುವುದು ಕಾಂಗ್ರೆಸ್‌ಗೆ ತೀವ್ರ ಮುಜುಗರವನ್ನುಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT