ಪಣಜಿ: ಪತ್ನಿಯ ಮದ್ಯದ ಚಟದಿಂದ ಬೇಸತ್ತು ಆಕೆಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ದಕ್ಷಿಣ ಗೋವಾದ ಫತ್ರೋದಾ ಎಂಬಲ್ಲಿ ಏಪ್ರಿಲ್ 30ರಂದು ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
.ಬೆಂಗಳೂರು | ನೈಜೀರಿಯಾದ ಮಹಿಳೆ ಕೊಲೆ: ಪರಿಚಯಸ್ಥರ ಮೇಲೆ ಶಂಕೆ.
ಆರೋಪಿ ಕೃಷ್ಣ ರಾಯ್ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು, ಪದೇ ಪದೇ ಮದ್ಯ ಸೇವಿಸುತ್ತಿದ್ದ ಆಕೆಯ ಮೇಲೆ ದೊಣ್ಣೆ ಹಾಗೂ ಬೆಲ್ಟ್ನಿಂದ ಹಲ್ಲೆ ಮಾಡಿದ್ದಾನೆ. ಇದು ಆಕೆಯ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೃತ್ಯ ಎಸಗಿದ ಬಳಿಕ ಗೋವಾದಿಂದ ಪರಾರಿಯಾಗಿದ್ದ ರಾಯ್ನನ್ನು ಪೊಲೀಸರು ಕೋಲ್ಕತ್ತದಲ್ಲಿ ಬಂಧಿಸಿದ್ದಾರೆ. ಕೃತ್ಯದ ಬಗ್ಗೆ ಪೊಲೀಸರಿಗೆ ಹೇಗೆ ಮಾಹಿತಿ ಸಿಕ್ಕಿದೆ ಎನ್ನುವುದರ ಬಗ್ಗೆ ತಕ್ಷಣಕ್ಕೆ ಗೊತ್ತಾಗಿಲ್ಲ.
.ಪುತ್ತೂರು | ತಾಯಿ ಕೊಲೆ: ಪುತ್ರನಿಗೆ 5 ವರ್ಷ ಜೈಲು ಶಿಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.