ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದ ಈ ನಗರದಲ್ಲಿ ಗೋಬಿ ಮಂಚೂರಿಯನ್ ನಿಷೇಧ!

ಫಾಸ್ಟ್‌ಫುಡ್‌ ‘ಗೋಬಿ ಮಂಚೂರಿಯನ್‌‘ನಿಂದ ಜನರ ಆರೋಗ್ಯದಲ್ಲಿ ವ್ಯತ್ಯಯದ ಆರೋಪ
Published 6 ಫೆಬ್ರುವರಿ 2024, 5:58 IST
Last Updated 6 ಫೆಬ್ರುವರಿ 2024, 5:58 IST
ಅಕ್ಷರ ಗಾತ್ರ

ಪಣಜಿ: ಉತ್ತರ ಗೋವಾದ ಮಾಪುಸಾ ನಗರದಲ್ಲಿ ಫಾಸ್ಟ್‌ಫುಡ್‌ ‘ಗೋಬಿ ಮಂಚೂರಿಯನ್ ‘ ಮಾರಾಟವನ್ನು ನಿಷೇಧಿಸಿ ಸ್ಥಳೀಯ ನಗರ ಪಾಲಿಕೆ ಆದೇಶ ಹೊರಡಿಸಿದೆ.

ನಗರದ ಯಾವುದೇ ಹೋಟೆಲ್‌– ಅಂಗಡಿ, ತಳ್ಳುಗಾಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ನಗರದಲ್ಲಿ ಪ್ರಸಿದ್ಧ ಬೋಗಡೇಶ್ವರ್ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಕೆಲ ಸದಸ್ಯರು ಗೋಬಿ ಮಂಚೂರಿಯನ್ ಮಾರಾಟ ಮಾಡುವುದನ್ನು ನಿಷೇಧಿಸಬೇಕು ಎಂದು ಮನವಿ ಸಲ್ಲಿಸಿದ್ದರು.

ಗೋಬಿ ಮಂಚೂರಿಯನ್ ಪದಾರ್ಥಕ್ಕೆ ವ್ಯಾಪಕ ರಾಸಾಯನಿಕ ಬೆರೆಸುವುದು, ಸ್ವಚ್ಛತೆ ಕಾಪಾಡದೇ ಕಂಡ ಕಂಡಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತಿನ್ನುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಅದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಪುಸಾ ನಗರ ಪಾಲಿಕೆ ಅಧ್ಯಕ್ಷೆ ಪ್ರಿಯಾ ಮಿಶಳ್ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಮುಂದಿನ ಆದೇಶದವರೆಗೂ ಗೋಬಿ ಮಂಚೂರಿಯನ್ ಮಾರಾಟಕ್ಕೆ ನಿಷೇಧ ಇರಲಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT