ನವದೆಹಲಿ: ಕರ್ನಾಟಕದಲ್ಲಿ ಅಂತರ್ಜಲದ ಬಳಕೆಯು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿಯ ವರದಿಯೊಂದು ಹೇಳಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಅಂತರ್ಜಲದ ಬಳಕೆ ಪ್ರಮಾಣವು ಶೇಕಡ 2.22ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿ ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಲಾಗಿದೆ.

ರಾಜ್ಯದ 237 ತಾಲ್ಲೂಕುಗಳಲ್ಲಿ ಅಂತರ್ಜಲದ ಬಳಕೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, 45 ತಾಲ್ಲೂಕುಗಳಲ್ಲಿ ಬಳಕೆಯು ಅತಿಯಾಗಿದೆ, 144 ತಾಲ್ಲೂಕುಗಳಲ್ಲಿ ಅಂತರ್ಜಲ ಬಳಕೆಯು ಸುರಕ್ಷಿತ ಮಟ್ಟದಲ್ಲಿ ಇದೆ.

ರಾಷ್ಟ್ರ ಮಟ್ಟದಲ್ಲಿ 6,746 ಘಟಕಗಳ (ಬ್ಲಾಕ್, ಮಂಡಲ ಅಥವಾ ತಾಲ್ಲೂಕು) ಪೈಕಿ 751 ಘಟಕಗಳಲ್ಲಿ ಅಂತರ್ಜಲ ಬಳಕೆಯು ಅತಿಯಾದ ಮಟ್ಟದಲ್ಲಿ ಇದೆ. ಅಂದರೆ ಈ ಘಟಕಗಳಲ್ಲಿ ಅಂತರ್ಜಲವನ್ನು ಬಳಕೆಗೆ ಪಡೆದುಕೊಳ್ಳುತ್ತಿರುವ ಪ್ರಮಾಣವು ಅಂತರ್ಜಲ ಮರುಪೂರಣ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ವರದಿ ಹೇಳಿದೆ.

ರಾಜಸ್ಥಾನ, ಹರಿಯಾಣ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಂತರ್ಜಲದಲ್ಲಿ ಫ್ಲೋರೈಡ್ ಪ್ರಮಾಣವು ಮಿತಿ ಮೀರಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ದೇಶದ 440 ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್ ಪ್ರಮಾಣವು ಹೆಚ್ಚಿದೆ. ಸಂಗ್ರಹಿಸಲಾದ ಶೇಕಡ 20ರಷ್ಟು ಮಾದರಿಗಳಲ್ಲಿ ನೈಟ್ರೇಟ್ ಪ್ರಮಾಣವು ಮಿತಿಯನ್ನು ಮೀರಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.