ಚಂಡೀಗಢ: ಫರೀದಾಬಾದ್ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪ್ರವೇಶ್ ಮೆಹ್ತಾ ಅವರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದು, ಹರಿಯಾಣದಲ್ಲಿ ಎಎಪಿಗೆ ಹಿನ್ನಡೆಯಾಗಿದೆ.
ಫರೀದಾಬಾದ್‌ನ ಬಿಜೆಪಿ ಸಂಸದರೂ ಆಗಿರುವ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜಾರ್ ಮತ್ತು ಕ್ಷೇತ್ರದ ಅಭ್ಯರ್ಥಿ ವಿಪುಲ್ ಗೋಯಲ್ ಸಮ್ಮುಖದಲ್ಲಿ ಮೆಹ್ತಾ ಕಮಲ ಪಾಳಯಕ್ಕೆ ಸೇರಿದರು.
‘ಬೃಹತ್ ಸಾರ್ವಜನಿಕ ಸಭೆಯಲ್ಲಿ ಮೆಹ್ತಾ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದರು. ಇದರಿಂದ ಪಕ್ಷದ ಬಲ ಹೆಚ್ಚಿದೆ. ಗೆಲುವು ನಿಶ್ಚಿತವಾಗಿದೆ. ಭಾರತೀಯ ಜನತಾ ಪಕ್ಷದ ಕುಟುಂಬಕ್ಕೆ ಅವರನ್ನು ಸ್ವಾಗತಿಸುವೆ’ ಎಂದು ಗೋಯಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.