ಚಂಡೀಗಢ: ಬಿಜೆಪಿಯು ಹರಿಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ 21 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಜುಲಾನಾ ಕ್ಷೇತ್ರದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರ ವಿರುದ್ಧ ಕ್ಯಾ.ಯೋಗೇಶ್ ಬೈರಾಗಿ ಅವರನ್ನು ಬಿಜೆಪಿಯು ಕಣಕ್ಕೆ ಇಳಿಸಿದೆ. ಮಾಜಿ ಸಚಿವರಾದ ಕೃಷ್ಣ ಕುಮಾರ್ ಬೇಡಿ ಮತ್ತು ಮನೀಶ್ ಗ್ರೋವರ್ ಮತ್ತು ಓಂ ಪ್ರಕಾಶ್ ಯಾದವ್ ಅವರನ್ನು ಕ್ರಮವಾಗಿ ನರವಾನಾ, ರೋಹ್ಟಕ್ ಮತ್ತು ನಾರನೌಲ್ ಕ್ಷೇತ್ರದಿಂದ ಕಣಕ್ಕಿಳಿಸಿದೆ.