ಇದೊಂದು "ಅಸಹ್ಯ" ಸರ್ಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು 'ಪವಿತ್ರ' ಮತ್ತು 'ಸುಭದ್ರ' ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆಗಳು.
— H D Kumaraswamy (@hd_kumaraswamy) December 9, 2019
ಯಾರು ಸಹ್ಯ, ಯಾರು ಅಸಹ್ಯ ಎಂಬುದನ್ನು ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದಾರೆ. ರಾಜಕೀಯ ಹೋರಾಟದಲ್ಲಿ ಸೋಲು, ಗೆಲುವು ಸಾಮಾನ್ಯ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಬಳಸಿಕೊಳ್ಳುವುದೇ ನಿಜವಾದ ರಾಜಕಾರಣಿಯ ಗುಣ. 1/2 https://t.co/11XxPcsy71
— B Sriramulu (@sriramulubjp) December 9, 2019
ಅಪ್ಪ-ಮಕ್ಕಳ ನಾಟಕ ಕಂಪನಿ ಈ ಬಾರಿ ಎಷ್ಟೇ ಕಣ್ಣೀರು ಸುರಿಸಿದರೂ ನಂಬದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ "ಅಪವಿತ್ರ ಮೈತ್ರಿ" ಮತ್ತು "ಅಭದ್ರ ಸರ್ಕಾರ" ರಚಿಸುವ ಕನಸು ಕಂಡವರನ್ನು "ಅಸಹ್ಯ" ಪಟ್ಟುಕೊಳ್ಳುವ ರೀತಿಯಲ್ಲಿ ತಿರಸ್ಕರಿಸಿದ್ದಾರೆ.
— C T Ravi 🇮🇳 ಸಿ ಟಿ ರವಿ (@CTRavi_BJP) December 9, 2019
ಎಡಬಿಡಂಗಿ ರಾಜಕಾರಣ ಮಾಡುವವರ ಠೇವಣಿ ಕಳೆದ ಜನರಿಗೆ ಮನದಾಳದ ಅಭಿನಂದನೆಗಳು.#BJPSweepsKarnataka https://t.co/5xY0LgAi1O
ಜನರ ಮೇಲೆ ಯಕ್ರಿ ಉರಿಕೊಳ್ತಿರ ..ನಿಮ್ ಕೈಲಿ ಕಿಸಿಯೋಕೆ ಆಗ್ಲಿಲ್ಲ ಅಂತ ಒಪ್ಕೋಲಿ ಜನರಿಗೆ ಗೊತ್ತಿದೆ ಯಾರಿಗೆ ಯಾವ ಪಕ್ಷಕ್ಕೆ ಮತ ನೀಡಿದ್ರೆ ರಾಜ್ಯಕ್ಕೆ ಒಳ್ಳೆದಾಗುತ್ತೆ ಅಂತ ಕುಣಿಲಗದೋನು ನೆಲ ಡೊಂಕು ಅಂದ್ರಂತೆ ಅದು ನೀವೇ..
— Sharath Paldar Gowdru (@PaldarGowdru) December 9, 2019
ಕುಮಾರಣ್ಣ ನಿಮ್ಮ ಮಾತಿನ ಅರ್ಥ ಗೊತ್ತಾಗಲಿಲ್ಲಾ
— C.T Manjunath BJP Mandya (@hnd_c) December 9, 2019
ಬಿ ಜೆ ಪಿ ಹಿರಿಯ ನಾಯಕರು ಯಾವ ಸರ್ಕಾರವನ್ನು ಅಸಹ್ಯ ಸರ್ಕಾರ ಎಂದಿದ್ದರು , ನಿಮ್ಮ ಹಾಗು ಸಿದ್ಧಣ್ಣನ ಅಪವಿತ್ರ ಮೈತ್ರಿ ಸರ್ಕಾರವನ್ನೇ ? ಹಾಗಿದ್ದರೆ ನಿಮ್ಮ ಮಾತು ಸರಿಯಾಗಿದೆ ಬಿಡಿ
37 ಸೀಟ್ ಗೆದ್ದು ಬಹುಮತ ಇರಲಿಲ್ಲ ಅಂದ್ರೂ ಸಿಎಂ ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕೂತಿದ್ರಿ ಆಗ ಅಸಹ್ಯ ಅನ್ನೋ ಪದ ನಿಮಗೆ ನೆನಪಿಗೆ ಬರಲಿಲ್ವೆ ಕುಮಾರಣ್ಣ
— Purvi Raj Arasu ( ಪೂರ್ವಿ) 🇮🇳🚩 (@purviraju1) December 9, 2019
ಜೆಡಿಎಸ್ ಗೆದ್ದರೆ ಪವಿತ್ರ ಗೆಲುವು
ಅದೇ ಬಿಜೆಪಿ ಗೆದ್ದರೆ ಅಪವಿತ್ರ ಗೆಲುವು🙄
ಬದಲಾಗಿ ಕುಮಾರಣ್ಣ ಇನ್ನೂ ಕಾಲ ಮಿಂಚಿಲ್ಲ
ಕೆ. ಆರ್. ಪೇಟೆ ಮತದಾರರು ಪ್ರಜ್ಞಾವಂತರು ಅಂತ ಇವಾಗ ಗೊತ್ತಾಗಿರಬೇಕು ಅಲ್ವಾ 🤣🤣
— Abhishek Hebbar🇮🇳 (@abhishek_r_h) December 9, 2019
It's a mandate given by the people of Karnataka, try to accept it
— 🇮🇳 Ayush Mitra 🇮🇳 (@RikAyush) December 9, 2019
ಸರ್ ಪಕ್ಷ ಅಂತಾ ಬಂದಾಗ ಯಾವತ್ತೂ ಬಿಟ್ಟುಕೊಟ್ಟಿಲ್ಲ,ಅದೇ ರೀತಿ, ನೀವು ಸಹ ಕಾರ್ಯಕರ್ತರ ಭಾವನೆಗಳಿಗೆ ಮತ್ತು ಅವರ ಕೆಲಸಕ್ಕೆ ಮಹತ್ವ ಕೊಡಿ #part_timeರಾಜಕಾರಣ ಮಾಡಬೇಡಿ ಇನ್ನಾದರೂ ಪಕ್ಷ ಸಂಘಟನೆಗೆ ಒತ್ತು ನೀಡಿ ಎಲ್ಲಾ ನಾಯಕರನ್ನ ಒಗ್ಗೂಡಿಸಿಕೊಂಡು ಪಕ್ಷವನ್ನು ಮುನ್ನಡೆಸಿ #ಭಾವನಾತ್ಮಕರಾಗಬೇಡಿ #ಚುನಾವಣೆಗೋಸ್ಕರ_ಕಾಯಬೇಡಿ#JDS #Karnataka
— sanJay V shaRanu (@sanJay_veeResh) December 9, 2019
ನೀವು ಯಾಕೆ ಸೋಲಾಗುತ್ತಿದೆ ಅಂತ ವಿಮರ್ಶೆ ಮಾಡಿಕೊಳ್ಳುವ ಸಮಯ
— City-zen speaks ಮೂಕ ಮಾತಾಡಿದಾಗ (@muralikg) December 9, 2019
- ಕಾಂಗ್ರೆಸ್ ವಿರುದ್ಧವಾಗಿ ಜನಮತ ಬಂದಾಗ ಅವರ ಜೊತೆ ಸೇರಿ ಸರಕಾರ ಮಾಡಿದ್ರಿ
- ಅಳುಮುಂಜಿ ಸಮಜಾಯಿಷಿಗಳು
- ಮುಂದಾಲೋಚನೆ ಇಲ್ಲದ ಅಭಿವೃದ್ಧಿ
- ನಿಮ್ಮ ಕುಟುಂಬದ ಜನರೇ ಕಂಡದ್ದು ನಿಮಗೆ
ಜನ ಇಂದು ಪ್ರಜ್ಞಾವಂತರು... ಮೊದಲಿನ ಹಾಗೆ ಗೂಬೆ ಕೂರಿಸಲಾಗದು.
ಎಚ್ಚೆತ್ತುಕೊಳ್ಳಿ..
ಹೌದು ಜನಗಳು ಪವಿತ್ರವಾದ ಮತ್ತು ಸುಭದ್ರ ಸರ್ಕಾರಕ್ಕೆ ಮುದ್ರೆ ಹೊತ್ತಿದ್ದಾರೆ.ಚುನಾವಣೆಯಲ್ಲಿ ಪ್ರಚಾರ ಮಾಡೋದು ಬಿಟ್ಟು ಅವ್ರು ಇವ್ರನ್ನು ಬೈಕಂಡು,ಟೀಕೆ ಮಾಡ್ಕಂಡು ಒಡಾಡ್ರಿ ಜನಗಳು ಇನ್ನೂ ಸರಿಯಾಗಿ ಮಾಡ್ತಾರೆ ನಿಮ್ಗೆ,ಸುಮ್ನೆ ನಿಮ್ಮ ಪಕ್ಷವನ್ನು ವಿಸರ್ಜಿಸಿ ನೀವು ಬಿಜೆಪಿ ಇಲ್ಲ ಕಾಂಗ್ರೆಸ್ ಸೇರಿಕೊಳ್ಳಿ, ಮಾನ ಮರ್ಯಾದೆ ಆದ್ರೂ ಉಳಿಬಹುದು
— Siddu (@siddugangadhar) December 9, 2019
ಅಸಹ್ಯ ನಿಮ್ಮಲ್ಲಿರುವುದರಿಂದ ಜನಾದೇಶ ಬಿಜೆಪಿಗೆ ಕೊಟ್ಟಿದೆ,
— Narendra (@narensalger) December 9, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.