ನವದೆಹಲಿ: ‘ಸಾಮಾಜಿಕ ಜಾಲತಾಣಗಳ ಮೂಲಕ ಸಮಾಲೋಚನೆ ನೀಡುವುದು ಮತ್ತು ಔಷಧ ಚೀಟಿ ನೀಡುವುದನ್ನು ವೈದ್ಯರು ನಿಲ್ಲಿಸಬೇಕು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಆರಂಭಿಕ ಸ್ಥಾನದಲ್ಲಿ ಇರಲು ಹಣ ನೀಡುವ ಅಥವಾ ಲೈಕ್ ಮತ್ತು ಫಾಲೋವರ್‌ಗಳನ್ನು ಖರೀದಿಸುವ ಅಭ್ಯಾಸವನ್ನು ವೈದ್ಯರಹ ನಿಲ್ಲಿಸಬೇಕು’ ಎಂಬ ನಿಯಮವನ್ನು ಜಾರಿಗೆ ತರಲು ರಾಷ್ಟ್ರೀಯ ವೈದ್ಯಕೀಯ ಆಯೋಗವು ಮುಂದಾಗಿದೆ.

ಆಯೋಗವು ಈ ಸಂಬಂಧ ಕರಡು ನಿಯಮಾವಳಿಯನ್ನು ರಚಿಸಿದೆ. ಕರಡು ನಿಯಮಾವಳಿಯನ್ನು ಬಿಡುಗಡೆ ಮಾಡಿದ್ದು, ಆಕ್ಷೇಪಗಳಿದ್ದರೆ30 ದಿನಗಳ ಒಳಗೆ ಸಲ್ಲಿಸಿ ಎಂದು ಆಹ್ವಾನ ನೀಡಿದೆ. ‘ವೈದ್ಯರು ಯಾವುದೇ ಔಷಧ ಕಂಪನಿ ಮತ್ತು ವೈದ್ಯಕೀಯ ಕ್ಷೇತ್ರದ ಕಂಪನಿಗಳಿಂದ ಕಳೆದ ಐದುವರ್ಷದಲ್ಲಿ ಪಡೆದಿರುವ ಗಳಿಕೆ ಮತ್ತು ಇತರೆ ಲಾಭಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು’ ಎಂದು ಕರಡು ನಿಯಮಾವಳಿಯಲ್ಲಿ ಹೇಳಲಾಗಿದೆ.

ಆದರೆ ವೈದ್ಯರು ಯಾವಾಗ ಪ್ರಮಾಣ ಪತ್ರ ಸಲ್ಲಿಸಬೇಕು, ನಿಯಮಿತವಾಗಿ ಇಂತಹ ಪ್ರಮಾಣ ಪತ್ರ ಸಲ್ಲಿಸಬೇಕೇ, ಈ ಪ್ರಮಾಣ ಪತ್ರಗಳನ್ನು ಪರಿಶೀಲಿಸುವ ಪ್ರಾಧಿಕಾರ ಯಾವುದು ಎಂಬುದರ ವಿವರಗಳು ಈ ಕರಡು ನಿಯಮಾವಳಿಯಲ್ಲಿ ಇಲ್ಲ. ಈಗ ಜಾರಿಯಲ್ಲಿರುವ ಕಾನೂನಿನಲ್ಲಿ ಈ ರೀತಿಯ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.