. ಉತ್ಪಾದನಾ ಘಟಕಗಳ ಸಾಮರ್ಥ್ಯ ಆಧರಿಸಿ ಸೆಸ್ ವಿಧಿಸಿದರೆ ಅಧಿಕಾರಶಾಹಿ ಹಸ್ತಕ್ಷೇಪ ಹೆಚ್ಚುತ್ತದೆ. ಇದು ‘ಇನ್‌ಸ್ಪೆಕ್ಟರ್ ರಾಜ್’ ವ್ಯವಸ್ಥೆಗೆ ಮತ್ತೆ ದಾರಿ ಮಾಡಿಕೊಡುತ್ತದೆ. ಮಸೂದೆಯಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಪರಿಶೀಲನಾ ಸಮಿತಿಗೆ ಕಳುಹಿಸಬೇಕು
ವರುಣ್ ಚೌಧರಿ ಕಾಂಗ್ರೆಸ್ ಸಂಸದ
ಸೆಸ್ ವಿಧಿಸುವುದರಿಂದ ಪಾನ್ ಮಸಾಲಾ ತಂಬಾಕು ಬಳಕೆಯನ್ನು ತಡೆಯಲು ಸಾಧ್ಯವೇ? ಇದಕ್ಕಾಗಿ ಬಿಹಾರದಂತೆ ಪಾನ್ ಮಸಾಲಾ ಮತ್ತು ಸಂಬಂಧಿತ ಪದಾರ್ಥಗಳ ಉತ್ಪನ್ನ ಮತ್ತು ಮಾರಾಟವನ್ನು ನಿಷೇಧಿಸಬೇಕು
ಸುಧಾಕರ್ ಸಿಂಗ್ ಆರ್‌ಜೆಡಿ ಸಂಸದ
ಸಂಸತ್ ಭವನಕ್ಕೆ ₹20000 ಕೋಟಿ ಪ್ರಧಾನಿ ಅವರ ಕಚೇರಿ ‘ಸೇವಾ ತೀರ್ಥ’ಕ್ಕೆ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಆ ಹಣವನ್ನು ಪಾನ್ ಮಸಾಲಾ ಮೇಲಿನ ಸೆಸ್‌ನಿಂದ ಸಂಗ್ರಹಿಸಲು ಸರ್ಕಾರ ಮುಂದಾಗಿದೆ
ಸುಗತಾ ರಾಯ್ ಟಿಎಂಸಿ ಸಂಸದ
ಕೇಂದ್ರವು ಆದಾಯ ಹೆಚ್ಚಿಸಿಕೊಳ್ಳಲು ಸೆಸ್‌ಗಳ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಸೆಸ್‌ಗಳನ್ನು ಹೆಚ್ಚಾಗಿ ವಿಧಿಸುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಇದರಿಂದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ನಲುಗಲಿವೆ