ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ತರಗತಿ ಕೋಣೆ, ಒಂದೇ ಬೋರ್ಡ್: ಏಕಕಾಲಕ್ಕೆ ಹಿಂದಿ–ಉರ್ದು ಬೋಧನೆ!

ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿರುವುದು ಒಂದೇ ಕ್ಲಾಸ್‌ರೂಮ್, ಒಂದೇ ಕಪ್ಪುಹಲಗೆ.. ಆದರೆ ಎರಡು ಭಾಷೆಯನ್ನು ಏಕಕಾಲಕ್ಕೆ ಇಬ್ಬರು ಶಿಕ್ಷಕರು ಬೋಧಿಸುತ್ತಾರೆ. ಒಂದೇ ಬೋರ್ಡ್‌ನಲ್ಲಿ ಇಬ್ಬರೂ ಬರೆಯುತ್ತಾರೆ, ಮಕ್ಕಳು ಕಿರುಚುತ್ತಾ, ತಮ್ಮ ಪಾಡಿಗೆ ಇದ್ದಾರೆ. ಮತ್ತೋರ್ವ ಶಿಕ್ಷಕಿ, ಬೆತ್ತ ಹಿಡಿದುಕೊಂಡು ತರಗತಿಯನ್ನು ನಿಯಂತ್ರಿಸುತ್ತಿದ್ದಾರೆ. ಇದು ಬಿಹಾರದ ಕಾತಿಹರ್‌ನ ಶಾಲೆಯೊಂದರ ಸ್ಥಿತಿ..

ಈ ಕುರಿತ ವಿಡಿಯೊ ಒಂದು ವೈರಲ್ ಆಗಿದ್ದು, ಸುದ್ದಿಸಂಸ್ಥೆ ಎಎನ್‌ಐ ಇದನ್ನು ಟ್ವೀಟ್ ಮಾಡಿದೆ.

ಒಂದೇ ತರಗತಿಯಲ್ಲಿ ಹಲವು ಮಕ್ಕಳು ಇರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಜತೆಗೆ, ತರಗತಿಯ ಬೋರ್ಡ್‌ನಲ್ಲಿ ಒಂದು ಭಾಗದಲ್ಲಿ ಶಿಕ್ಷಕಿಯೋರ್ವರು ಮಕ್ಕಳಿಗೆ ಹಿಂದಿ ಬರೆದಿದ್ದಾರೆ. ಅದೇ ಬೋರ್ಡ್‌ನ ಮತ್ತೊಂದು ಬದಿಯಲ್ಲಿ ಶಿಕ್ಷಕರೋರ್ವರು ಉರ್ದು ಬರೆದಿರುವುದು ಕಾಣಿಸುತ್ತದೆ.

2017ರಲ್ಲಿ ಶಿಕ್ಷಣ ಇಲಾಖೆ ಉರ್ದು ಪ್ರೈಮರಿ ಶಾಲೆಯನ್ನು ನಮ್ಮ ಶಾಲೆಗೆ ಸ್ಥಳಾಂತರಿಸಿತು. ಅಲ್ಲಿಂದ ನಂತರ, ಒಂದೇ ತರಗತಿಯಲ್ಲಿ, ಒಂದೇ ಬೋರ್ಡ್‌ನಲ್ಲಿ ಹಿಂದಿ–ಉರ್ದು ಬೋಧಿಸಲಾಗುತ್ತಿದೆ, ನಮ್ಮ ಶಾಲೆಯಲ್ಲಿ ಹೆಚ್ಚಿನ ತರಗತಿ ಕೋಣೆ ಇಲ್ಲ, ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದು ಆದರ್ಶ್ ಮಿಡ್ಲ್ ಸ್ಕೂಲ್‌ನ ಸಹ ಶಿಕ್ಷಕಿ ಕುಮಾರಿ ಪ್ರಿಯಾಂಕ ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಆದರ್ಶ್ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆ ಇದ್ದರೆ, ಒಂದು ಕೊಠಡಿಯನ್ನು ಉರ್ದು ಪ್ರೈಮರಿ ಶಾಲೆಗೆ ನೀಡಲಾಗುತ್ತದೆ. ಒಂದೇ ಕೋಣೆಯಲ್ಲಿ, ಎರಡು ವಿಭಿನ್ನ ಭಾಷೆ ಮತ್ತು ತರಗತಿಯ ಮಕ್ಕಳು ಓದುವುದು ಸರಿಯಲ್ಲ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ್ ಗುಪ್ತಾ ಹೇಳಿರುವುದನ್ನು ಎಎನ್‌ಐ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT