ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌, ನೀಟ್‌, ಜೆಇಇ ಪರೀಕ್ಷಾ ದಿನಾಂಕ ಪ್ರಕಟ: ವರ್ಷಕ್ಕೆ ಒಂದೇ ಬಾರಿ ನೀಟ್‌

Last Updated 21 ಆಗಸ್ಟ್ 2018, 20:28 IST
ಅಕ್ಷರ ಗಾತ್ರ

ನವದೆಹಲಿ:ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ವರ್ಷದಲ್ಲಿ ಎರಡು ಬಾರಿ ಆನ್‌ಲೈನ್‌ ಮೂಲಕ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಹಠಾತ್‌ ಕೈಬಿಟ್ಟಿದೆ.

ಕಂಪ್ಯೂಟರ್‌ ಆಧಾರಿತ ಅಥವಾ ಆನ್‌ಲೈನ್‌ ಪರೀಕ್ಷೆ ನಡೆಸುವ ಬದಲು ಈ ಮೊದಲಿನಂತೆ ವರ್ಷಕ್ಕೆ ಒಂದೇ ಬಾರಿ ಪೆನ್‌ ಮತ್ತು ಪೇಪರ್‌ ಮಾದರಿಯಲ್ಲಿ ‘ನೀಟ್‌’ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ಪ್ರಕಟಿಸಿದೆ.

ಕಳೆದ ಬಾರಿ ಎಷ್ಟು ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಲಾಗಿತ್ತೋ ಈ ಬಾರಿಯೂ ಅಷ್ಟೇ ಭಾಷೆಗಳಲ್ಲಿ ಪಶ್ನೆ ಪತ್ರಿಕೆ ಪ್ರಕಟಿಸಲಾಗುವುದು ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ನೀಟ್‌ ಪರೀಕ್ಷಾ ವಿಧಾನ ಮಾತ್ರ ಬದಲಾವಣೆಯಾಗಲಿದೆ. ಉಳಿದಂತೆ ಜೆಇಇ ಮೇನ್‌, ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ–ಎನ್‌ಇಟಿ) ಯಥಾರೀತಿ ನಡೆಯಲಿವೆ.

ಈ ಎಲ್ಲ ಪರೀಕ್ಷೆಗಳು ಆನ್‌ಲೈನ್‌ ಅಥವಾ ಕಂಪ್ಯೂಟರ್ ಮಾದರಿ ಪರೀಕ್ಷೆಗಳಾಗಿದ್ದು, ಅದರಲ್ಲಿ ಯಾವ ಬದಲಾವಣೆ ಇಲ್ಲ. ಜೆಇಇ ಮೇನ್‌ ವರ್ಷದಲ್ಲಿ ಎರಡು ಬಾರಿ ನಡೆಯಲಿದೆ.

ಮೇ 5ರಂದು ನೀಟ್‌

ಎನ್‌ಟಿಎ ಮಂಗಳವಾರ ಬಿಡುಗಡೆ ಮಾಡಿರುವ ಪರಿಷ್ಕೃತ ವೇಳಾಪಟ್ಟಿಯಂತೆ 2019ರ ಮೇ 5ರಂದು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಬಾರಿಗೆ ನೀಟ್‌ ನಡೆಯಲಿದೆ.

ನೀಟ್‌ ಬರೆಯುವ ವಿದ್ಯಾರ್ಥಿಗಳು ಇದೇ ನವೆಂಬರ್‌ 1ರಿಂದ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಣಿಗೆ ನ.30ಕೊನೆಯ ದಿನವಾಗಿದೆ. ಏಪ್ರಿಲ್‌ 15ರಂದು ಎನ್‌ಟಿಎ ವೆಬ್‌ಸೈಟ್‌ನಿಂದ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಜೂನ್‌ 5ರಂದು ಫಲಿತಾಂಶ ಪ್ರಕಟವಾಗಲಿದೆ.

ಪರೀಕ್ಷೆ ನೋಂದಣಿ ಪ್ರವೇಶ ಪತ್ರ ಪರೀಕ್ಷೆ ಫಲಿತಾಂಶ
ಯುಜಿಸಿ ನೆಟ್‌ ಸೆಪ್ಟೆಂಬರ್‌ 1–30 ನವೆಂಬರ್‌ 19 ಡಿಸೆಂಬರ್‌ 9–23 2019ರ ಜನವರಿ 10
ನೀಟ್‌(ಯುಜಿ) ನವೆಂಬರ್‌ 1–30 2019ರ ಏಪ್ರಿಲ್‌ 15 ಮೇ 5‌ ಜೂನ್‌ 5
ಜೆಇಇ ಮೇನ್‌–1 ಸೆಪ್ಟೆಂಬರ್‌ 1–30 ಡಿಸೆಂಬರ್‌ 17 2019ರ ಜನವರಿ 6–20 ಜನವರಿ 31
ಜೆಇಇ ಮೇನ್‌–2 2019ರ ಫೆಬ್ರುವರಿ 8-ಮಾರ್ಚ್‌ 7 ಮಾರ್ಚ್‌ 18 ಏಪ್ರಿಲ್‌ 6–20 ಏಪ್ರಿಲ್‌ 30
ಸಿಮ್ಯಾಟ್‌/ಜಿಪ್ಯಾಟ್‌ ನವೆಂಬರ್‌ 1–30 2019ರ ಜನವರಿ 7 ಜನವರಿ 28 ಫೆಬ್ರುವರಿ 10

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ಯುಜಿಸಿ ನೆಟ್‌, ನೀಟ್‌, ಸಿಮ್ಯಾಟ್‌, ಜಿಪ್ಯಾಟ್‌, ಜೆಇಇ ಮೇನ್ಸ್ 1 ಹಾಗೂಜೆಇಇ ಮೇನ್ಸ್ 2 ಪರೀಕ್ಷೆಗಳನ್ನು ನಡೆಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿತ್ತು.

ಜೆಇಇ (ಜಂಟಿ ಉನ್ನತ ಪ್ರವೇಶ ಪರೀಕ್ಷೆ) ಮತ್ತು ಯುಜಿಸಿ ನೆಟ್‌ ಪರೀಕ್ಷೆಗಳನ್ನು ಕಂಪ್ಯೂಟರ್‌ ಆಧರಿತ ಮಾದರಿಯಲ್ಲಿ ನಡೆಸಲಾಗುತ್ತಿದ್ದು,ಆನ್‌ಲೈನ್‌ ಪರೀಕ್ಷೆಗಳಲ್ಲ ಎಂದು ಈಗಾಗಲೇಸಚಿವ ಪ್ರಕಾಶ್‌ ಜಾವಡೇಕರ್‌ ಸ್ಪಷ್ಟಪಡಿಸಿದ್ದಾರೆ. ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಏಪ್ರಿಲ್‌ನಲ್ಲಿ ಜೆಇಇ(ಮೇನ್ಸ್‌) ಹಾಗೂ ಫೆಬ್ರುವರಿ ಮತ್ತು ಮೇನಲ್ಲಿ ನೀಟ್‌ ಪರೀಕ್ಷೆಗಳು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಪ್ರಕಟಣೆಯ ಪ್ರಕಾರ, ನೀಟ್‌ ಪರೀಕ್ಷೆ ಒಂದು ಬಾರಿ ಮಾತ್ರ, 2019ರ ಮೇ 5ರಂದು ನಡೆಯಲಿದೆ ಹಾಗೂಈ ಬಾರಿ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪೆನ್‌–ಪೇಪರ್‌ ಪರೀಕ್ಷಾ ಮಾದರಿಯಲ್ಲಿಯೇ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT