ಚೆನ್ನೈ: ತಾಂತ್ರಿಕ ದೋಷದಿಂದಾಗಿ ಭಾರತೀಯ ವಾಯುಪಡೆಯ(ಐಎಎಫ್) ತರಬೇತಿ ಹೆಲಿಕಾಪ್ಟರ್ ಚೆನ್ನೈ ಸಮೀಪದ ಪೋರ್ಪಂದಲ್ ಬಳಿಯ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ .
ಇಬ್ಬರು ವ್ಯಕ್ತಿಗಳು ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಸಲವಕ್ಕಂ ಪೊಲೀಸ್ ಠಾಣಾ ವ್ಯಾಪ್ತಿಯ ಪೋರ್ಪಂದಲ್ ಪ್ರದೇಶಕ್ಕೆ ಸಮೀಪಿಸಿದಾಗ ತಾಂತ್ರಿಕ ಅಡಚಣೆ ಉಂಟಾಗಿದೆ. ಪೈಲಟ್ ಹೆಲಿಕಾಪ್ಟರ್ ಅನ್ನು ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ತಾಂತ್ರಿಕ ನೆರವು ನೀಡಲು ಮತ್ತೊಂದು ಹೆಲಿಕಾಪ್ಟರ್ ಆ ಸ್ಥಳಕ್ಕೆ ಬಂದಿಳಿದಿದೆ. ದುರಸ್ತಿ ಬಳಿಕ ಎರಡೂ ಹೆಲಿಕಾಪ್ಟರ್‌ಗಳು ಸೇನಾ ನೆಲೆಗೆ ಮರಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.