ನವದೆಹಲಿ: ಜನಸಂಪರ್ಕಕ್ಕೆ ಲಭ್ಯವಾಗದ ಅಥವಾ ಅತಿ ದೂರದ ಸ್ಥಳಗಳಲ್ಲಿ ಕೋವಿಡ್–19ನಂಥ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರನ್ನು ಸ್ಥಳಾಂತರಿಸಲು ಭಾರತೀಯ ವಾಯುಪಡೆಯು (ಐಎಎಫ್) ‘ಅರ್ಪಿತ್’ ಹೆಸರಿನ ಪಾಡ್ ಅನ್ನು ಅಭಿವೃದ್ಧಿ ಪಡಿಸಿದೆ.

ಭಾರತೀಯ ವಾಯುಪಡೆಯು ದೇಶೀಯವಾಗಿ ವಿನ್ಯಾಸ ಪಡಿಸಿರುವ ‘ಅರ್ಪಿತ್’ ಅನ್ನು ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ಪ್ರತ್ಯೇಕವಾಗಿ ಅಳವಡಿಸಬಹುದಾಗಿದೆ.

‘ಕೋವಿಡ್–19ನಂಥ ಸಾಂಕ್ರಾಮಿಕ ರೋಗಗಳು ಗಾಳಿ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಯಲು ರೋಗಿಯನ್ನುಸ್ಥಳಾಂತರಿಸುವ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ‘ಅರ್ಪಿತ್’ ನೆರವಿಗೆ ಬರುತ್ತದೆ. ಇದರಲ್ಲಿ ಸೂಕ್ತ ವಾಯುವಿನಿಮಯದ ವ್ಯವಸ್ಥೆ, ವೈದ್ಯಕೀಯ ಮೇಲ್ವಿಚಾರಣಾ ಸಾಧನಗಳು ಮತ್ತು ರೋಗಿಗೆ ಅಗತ್ಯವಾದ ಶಾಖ ನೀಡುವ ವ್ಯವಸ್ಥೆಯಿದೆ. ‘ಅರ್ಪಿತ್’ ಅನ್ನು ದೇಶೀಯವಾಗಿ ₹60 ಸಾವಿರ ವೆಚ್ಚದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದೇ ಮಾದರಿಯ ಆಮದು ಉಪಕರಣಗಳಿಗೆ ₹ 60ಲಕ್ಷದ ತನಕ ವೆಚ್ಚವಾಗುತ್ತದೆ’ಎಂದು ಐಎಎಫ್ ಹೇಳಿದೆ.

ವಾಯು ಮಾರ್ಗದ ಮೂಲಕ ರೋಗಿಯನ್ನು ಸಾಗಿಸುವಾಗ ವಾಯುಪಡೆ ಸಿಬ್ಬಂದಿ, ಭೂಸೇನಾ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯವನ್ನು ತಡೆಗಟ್ಟಲು ‘ಅರ್ಪಿತ್’ ನೆರವಾಗಲಿದೆ. ಎತ್ತರದ ಪ್ರದೇಶ, ದೂರ ಮತ್ತು ಪ್ರತ್ಯೇಕ ಸ್ಥಳಗಳಲ್ಲಿ ತುರ್ತು ಸ್ಥಿತಿಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಲು ‘ಅರ್ಪಿತ್’ ಸಹಕಾರಿಯಾಗಲಿದೆ ಎಂದೂ ಐಎಎಫ್ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.