ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಇಡಿ ಸ್ಫೋಟ: ಇಬ್ಬರು ಎಸ್‌ಟಿಎಫ್ ಸಿಬ್ಬಂದಿಗೆ ಗಾಯ

Published 10 ಏಪ್ರಿಲ್ 2024, 8:29 IST
Last Updated 10 ಏಪ್ರಿಲ್ 2024, 8:29 IST
ಅಕ್ಷರ ಗಾತ್ರ

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇರಿಸಿದ್ದಾರೆ ಎನ್ನಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ವಿಶೇಷ ಕಾರ್ಯ ಪಡೆಯ (ಎಸ್‌ಟಿಎಫ್) ಇಬ್ಬರು ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಇಟ್ವಾರ್ ಗ್ರಾಮದಲ್ಲಿ ಇಂದು ( ಬುಧವಾರ) ನಸುಕಿನ ಜಾವ ಈ ಘಟನೆ ನಡೆದಿದೆ. ಭದ್ರತಾ ಕಾರ್ಯಾಚರಣೆ ಸಂಬಂಧ ಸಿಬ್ಬಂದಿಯು ಅಲ್ಲಿಗೆ ತೆರಳಿದ್ದರು ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಯಗೊಂಡವರನ್ನು ಶಿವಲಾಲ್ ಮಾಂಡವಿ ಮತ್ತು ಮಿಥ್ಲೇಶ್ ಮಾರ್ಕಮ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT