ನವದೆಹಲಿ: ಟ್ವಿಟರ್ನಲ್ಲಿರುವ ಎಲ್ಲ ಅಶ್ಲೀಲ ಚಿತ್ರ, ವಿಡಿಯೊ ಮತ್ತು ಅಶ್ಲೀಲ ವಿಷಯಗಳನ್ನು ಒಂದು ವಾರದೊಳಗೆ ಟ್ವಿಟರ್ ತಾಣದಿಂದ ತೆಗೆದುಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯೂ) ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ.

ಟ್ವಿಟರ್ನ ಹಲವಾರು ಪ್ರೊಫೈಲ್ಗಳಲ್ಲಿ ಅಶ್ಲೀಲ ಚಿತ್ರ, ಅಶ್ಲೀಲ ವಿಡಿಯೊ ಹಾಗೂ ಅಶ್ಲೀಲ ವಿಷಯಗಳು ಇರುವ ಬಗ್ಗೆ ಎನ್ಸಿಡಬ್ಲ್ಯು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಿಗೂ ಎನ್ಸಿಡಬ್ಲ್ಯುಅಧ್ಯಕ್ಷೆ ಎಂ.ಎಸ್. ರೇಖಾ ಶರ್ಮಾ ಅವರು ಪತ್ರ ಬರೆದಿದ್ದು, ಅಶ್ಲೀಲ ಚಿತ್ರ, ವಿಡಿಯೊ ಮತ್ತು ಅಶ್ಲೀಲ ವಿಷಯಗಳನ್ನು ತೆಗೆದು ಹಾಕಲು ವಾರದ ಗಡುವು ನೀಡಿದ್ದಾರೆ.

ಈ ಮೊದಲು ಇದೇ ರೀತಿಯ ದೂರು ಬಂದಿದ್ದು, ಆಯೋಗವು ತಕ್ಷಣದ ಕ್ರಮಕ್ಕಾಗಿ ಟ್ವಿಟರ್ನ ಗಮನಕ್ಕೆ ತಂದಿತು. ಆದರೆ, ಟ್ವಿಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎನ್ಸಿಡಬ್ಲ್ಯೂ ತಿಳಿಸಿದೆ.

ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವುದಲ್ಲದೆ, ಟ್ವಿಟ್ಟರ್ನ ನೀತಿಯನ್ನೂ ಉಲ್ಲಂಘಿಸುವ ಇಂತಹ ನಿಷೇಧಿತ ವಿಷಯಗಳು ಟ್ವಿಟರ್ನಲ್ಲಿ ಲಭ್ಯವಾಗುತ್ತಿದ್ದರೂ ಅವುಗಳನ್ನು ತೆಗೆದುಹಾಕಲು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ... ಕೋವಿಡ್ ಪತ್ತೆಗೆ ಮಾಸ್ಕ್; 90 ನಿಮಿಷಗಳಲ್ಲಿ ಫಲಿತಾಂಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.