ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಬಾರಿಗೆ ಬಾಂಗ್ಲಾ ಸೈನಿಕರ ಜತೆ ಸಿಹಿ ಹಂಚಿಕೊಂಡ ಮಹಿಳಾ ಬಿಎಸ್‌ಎಫ್‌ ತಂಡ

Published 15 ಆಗಸ್ಟ್ 2024, 13:08 IST
Last Updated 15 ಆಗಸ್ಟ್ 2024, 13:08 IST
ಅಕ್ಷರ ಗಾತ್ರ

ನಾದಿಯಾ (ಪಶ್ಚಿಮ ಬಂಗಾಳ): ಇದೇ ಮೊದಲ ಬಾರಿಗೆ ಇಲ್ಲಿನ ಗೆಡೆ ಗಡಿ ಪೋಸ್ಟ್‌ನಲ್ಲಿ ಮಹಿಳಾ ತಂಡವೊಂದು ನೆರೆಯ ದೇಶದ ಮಹಿಳಾ ಸೈನಿಕ ತಂಡದೊಂದಿಗೆ ಸಿಹಿ ಹಂಚಿಕೊಳ್ಳುವ ಸಂಪ್ರದಾಯವನ್ನು ನೆರವೇರಿಸಿದೆ. 

ಸ್ವಾತಂತ್ರ್ಯೋತ್ಸದ ಈ ದಿನದಂದು ಭಾರತದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಮಹಿಳಾ ತಂಡವು ಬಾಂಗ್ಲಾದೇಶದ ಗಡಿ ಭದ್ರತಾ ಮಹಿಳಾ ತಂಡದೊಂದಿಗೆ (ಬಿಜಿಬಿ) ಸಿಹಿ ಹಂಚಿಕೊಂಡರು. ಬಾಂಗ್ಲಾದೇಶದಲ್ಲಿ ಗಲಭೆ ನಡೆಯುತ್ತಿರುವ ಕಾರಣದಿಂದಾಗಿ ಬಾಂಗ್ಲಾ–ಭಾರತ ಗಡಿಯುದ್ದಕ್ಕೂ ‘ಹೈ ಅಲರ್ಟ್‌’ ಜಾರಿಯಲ್ಲಿದೆ.

ತಂಡದಲ್ಲಿ ಆರು ಮಹಿಳಾ ಕಾನ್‌ಸ್ಟೆಬಲ್‌ಗಳಿದ್ದರು. ‘ಶುಭಾಶಯ ಹಂಚಿಕೊಳ್ಳುವುದು, ಸಿಹಿ ಹಂಚಿಕೊಳ್ಳುವುದು ಗಡಿಯನ್ನು ಕಾಯುವ ಎರಡೂ ದೇಶಗಳ ಸೈನಿಕರಿಗೆ ಪರಸ್ಪರರ ಕುರಿತು ಇರುವ ಗೌರವವನ್ನು ಸೂಚಿಸುತ್ತದೆ. ಇದೇ ಮೊದಲ ಬಾರಿಗೆ ಮಹಿಳಾ ತಂಡವೊಂದು ಈ ಸಂಪ್ರದಾಯವನ್ನು ನೆರವೇರಿಸಿದೆ’ ಎಂದು ಕಮಾಂಡೆಂಟ್‌ ಸುಜೀತ್‌ ಕುಮಾರ್‌ ಸಂಸತ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT