ಬೆಂಗಳೂರು: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್–19 ದೃಢಪಟ್ಟ 96,424 ಹೊಸ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ ಸೋಂಕಿನಿಂದ 1,174 ಮಂದಿ ಸಾವಿಗೀಡಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 3,192 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 59 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 2,18,772 ಏರಿಕೆಯಾಗಿದ್ದು, 1,90,021 ಮಂದಿ ಈವರೆಗೆ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 4,242 ಆಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಗುಜರಾತಿನಲ್ಲಿ ಒಂದೇ ದಿನ 1,400 ಪ್ರಕರಣ
ಗುಜರಾತಿನಲ್ಲಿ ಶುಕ್ರವಾರ 1,410 ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,20,498ಕ್ಕೇರಿದೆ.

ಒಡಿಶಾದಲ್ಲಿ 4,101 ಮಂದಿ ಗುಣಮುಖ
ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ 4,101 ಗುಣಮುಖರಾಗಿದ್ದಾರೆ.1,71,341 ಸೋಂಕು ಪ್ರಕರಣಗಳು ಇಲ್ಲಿವೆ. ಈವರೆಗೆ 682 ಮಂದಿ ಮೃತಪಟ್ಟಿದ್ದು 1,37,567 ಮಂದಿ ಚೇತರಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ 6,806 ಚೇತರಿಕೆ, 98 ಸಾವು
ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 6,584 ಹೊಸ ಸೋಂಕು ಪ್ರಕರಣಗಳು ವರದಿ ಆಗಿವೆ. 6,806 ಮಂದಿ ಚೇತರಿಸಿಕೊಂಡಿದ್ದು 98 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ ಕೋವಿಡ್ ಸೋಂಕಿತರ ಸಂಖ್ಯೆ 3,42,788 ಆಗಿದ್ದು 4,869 ಮಂದಿ ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 21,656 ಹೊಸಪ್ರಕರಣ
ಮಹಾರಾಷ್ಟ್ರದಲ್ಲಿ 21,656 ಹೊಸ ಪ್ರಕರಣಗಳು ವರದಿ ಆಗಿದ್ದು ಶುಕ್ರವಾರ ಮೃತಪಟ್ಟವರ ಸಂಖ್ಯೆ 405. ಗುಣಮುಖರಾದವರು 22,078, ಒಟ್ಟು ಸೋಂಕಿತರ ಸಂಖ್ಯೆ 11,67,496, ಮೃತರ ಸಂಖ್ಯೆ 31,791 ಮತ್ತು ಚೇತರಿಸಿಕೊಂಡವರ ಸಂಖ್ಯೆ 8,34,432 ಆಗಿದೆ.

ತಮಿಳುನಾಡಿನಲ್ಲಿ 67 ಮಂದಿ ಸಾವು
ತಮಿಳುನಾಡಿನಲ್ಲಿ 5,488 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 67 ಮಂದಿ ಸಾವಿಗೀಡಾಗಿದ್ದು 5,525 ಮಂದಿ ಗುಣಮುಖರಾಗಿದ್ದಾರೆ ಎಂದು ರಾಜ್ಯಆರೋಗ್ಯ ಇಲಾಖೆ ಹೇಳಿದೆ, ಇಲ್ಲಿ ಈಗ ಒಟ್ಟು 5,30,908 ಸೋಂಕು ಪ್ರಕರಣಗಳಿದ್ದು 8,685 ಸಾವಿಗೀಡಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 1,330 ಹೊಸ ಪ್ರಕರಣ
ಜಮ್ಮು ಮತ್ತು ಕಾಶ್ಮೀರದಲ್ಲಿ1,330 ಹೊಸ ಪ್ರಕರಣಗಳು ವರದಿ ಆಗಿದ್ದು 784 ಮಂದಿ ಗುಣಮುಖರಾಗಿದ್ದಾರೆ. 15 ಮಂದಿ ಶುಕ್ರವಾರ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 61,041 ಸೋಂಕು ಪ್ರಕರಣಗಳಿದ್ದು ಈವರೆಗೆ 966 ಮಂದಿ ಸಾವಿಗೀಡಾಗಿದ್ದಾರೆ.

ಕೇರಳದಲ್ಲಿ 4,167 ಹೊಸ ಪ್ರಕರಣ
ಕೇರಳದಲ್ಲಿ 4,167 ಹೊಸ ಪ್ರಕರಣಗಳು ವರದಿಯಾಗಿದ್ದು ಈವರೆಗೆ ಇಲ್ಲಿ ವರದಿಯಾಗಿರುವ ಸೋಂಕಿತರ ಸಂಖ್ಯೆ 35,724 ಆಗಿದೆ.ಈವರೆಗೆ 90,089 ಮಂದಿ ಗುಣಮುಖರಾಗಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ.

ದೇಶದಲ್ಲಿಗ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 52 ಲಕ್ಷದ ಗಡಿ ದಾಟಿದೆ. ಒಟ್ಟು 52,14,678 ಪ್ರಕರಣಗಳ ಪೈಕಿ 10,17,754 ಸಕ್ರಿಯ ಪ್ರಕರಣಗಳಿದ್ದು, ಈವರೆಗೂ 41,12,552 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ 84,372 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಈವರೆಗೂ ದೇಶದಾದ್ಯಂತ 6,15,72,343 ಗಂಟಲು ದ್ರವ ಮಾದರಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಹಾಗೂ ಗುರುವಾರ ಒಂದೇ ದಿನ 10,06,615 ಲಕ್ಷ ಪರೀಕ್ಷೆಗಳನ್ನು ಮಾಡಿರುವುದಾಗಿ ಐಸಿಎಂಆರ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.