ಚಾಟ್‌ಜಿಪಿಟಿ ಇದ್ದಂತೆಯೇ ಇದೂ ಒಂದು ಚಾಟ್‌ಬೋರ್ಡ್ ಆಗಿದೆ. ಇದು ಕೃತಕ ಬುದ್ಧಿಮತ್ತೆ ಮೂಲಕ ಕಾರ್ಯನಿರ್ವಹಿಸುತ್ತದೆ. ನೀವು ಅದಕ್ಕೆ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು. ಅಂತರ್ಜಾಲದಲ್ಲಿ ಲಭ್ಯವಿರುವ ಎಲ್ಲಾ ದತ್ತಾಂಶಗಳನ್ನು ಒಗ್ಗೂಡಿಸಿಕೊಂಡು ಕೆಲವೇ ಕ್ಷಣಗಳಲ್ಲಿ ವಿಸ್ತೃತವಾದ ಉತ್ತರವನ್ನು ನೀಡುತ್ತದೆ. ದತ್ತಾಂಶ ಸಂಗ್ರಹದ ವಿಚಾರದಲ್ಲಿ ಚಾಟ್‌ಜಿಪಿಟಿಗಿಂತ ‘ಗ್ರಾಕ್’ ಉತ್ತಮವಾಗಿದೆ. ‘ಎಕ್ಸ್’ ಆ್ಯಪ್‌ನಲ್ಲಿ ಇದು ಲಭ್ಯವಿದೆ. ‘ಗ್ರಾಕ್’ನದ್ದೇ ಪ್ರತ್ಯೇಕ ವೆಬ್‌ಸೈಟ್ ಕೂಡ ಇದೆ.