ಪಾಕ್‌ಗೆ ಮತ್ತೆ ಮೋದಿ ಎಚ್ಚರಿಕೆ | ಭಾರತದ ವಾಯುನೆಲೆಗೆ ಹಾನಿಯಾಗಿದೆ ಎಂದು ಪ್ರಚಾರ ಮಾಡಿದ್ದ ಪಾಕ್ ಸೇನೆ
ನೀವು ಭಯೋತ್ಪಾದನೆಯ ಎಲ್ಲ ದೊಡ್ಡ ನೆಲೆಗಳನ್ನು ನಾಶಪಡಿಸಿದ್ದೀರಿ. ಭಯೋತ್ಪಾದಕರ ಒಂಬತ್ತು ಅಡಗುತಾಣಗಳು ನಾಶವಾದವು. 100ಕ್ಕೂ ಹೆಚ್ಚು ಭಯೋತ್ಪಾದಕರು ಸತ್ತರು. ಭಾರತದಲ್ಲಿ ಮುಗ್ಧ ಜನರ ರಕ್ತ ಚೆಲ್ಲುವುದರಿಂದ ವಿನಾಶ ಮತ್ತು ಮಹಾ ವಿನಾಶ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ.