ಪುಣೆ: ಪಾಕಿಸ್ತಾನ ಜತೆಗಿನ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕಾಗಿತ್ತು ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಅಸಾವರಿ ಜಗದಾಲೆ ಅವರು ಕರೆ ನೀಡಿದ್ದಾರೆ.

ಭಯೋತ್ಪಾದಕರು ಅವರ ತಂದೆ ಮತ್ತು ಕುಟುಂಬದ ಸ್ನೇಹಿತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಸಂದರ್ಭದಲ್ಲಿ ಅಸಾವರಿ ಅವರು ಬೈಸರನ್ ಕಣಿವೆಯಲ್ಲಿ ನೆಲಸಿದ್ದರು.

‘ಕೆಲವು ತಿಂಗಳುಗಳ ಹಿಂದೆ ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಹತ್ಯೆಗೀಡಾಗಿದ್ದಾರೆ. ಇಷ್ಟೆಲ್ಲಾ ನಡೆದರೂ ಬಿಸಿಸಿಐ ಈ ಪಂದ್ಯಾವಳಿ ನಡೆಸಿದರೆ, ನಿಜಕ್ಕೂ ತಪ್ಪಾದ ನಡೆಯಾಗಿದೆ’ ಎಂದು ಹೇಳಿದ್ದಾರೆ.

‘ಪಹಲ್ಗಾಮ್ ಭಯೋತ್ಪಾದಕ ದಾಳಿ, ಸೈನಿಕರ ಸಮರ್ಪಣೆ, ವರ್ಷಗಳಿಂದ ನಡೆಸುತ್ತಿರುವ ಅಸಂಖ್ಯಾತ ದಾಳಿಗಳನ್ನು ಮರೆತು ಈ ಪಂದ್ಯ ಆಡಲು ಸಿದ್ಧವಾದವರಿಗೆ, ಆಯೋಜಿಸಿದವರಿಗೆ ಮತ್ತು ಇದನ್ನು ಪ್ರೋತ್ಸಾಹಿಸಿದವರಿಗೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.