ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ–ಭಾರತ ಸಂಘರ್ಷ: ಹುತಾತ್ಮ ಯೋಧರ ಪಟ್ಟಿ ಬಿಡುಗಡೆ ಮಾಡಿದ ಸೇನೆ

Last Updated 17 ಜೂನ್ 2020, 14:08 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ಚೀನಾ ಸೇನಾಪಡೆ ವಿರುದ್ಧನಡೆದ ಸಂಘರ್ಷದ ವೇಳೆ ಹುತಾತ್ಮರಾದ 20 ಯೋಧರ ವಿವರವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

ಜೂನ್ 15, 16ರ ರಾತ್ರಿ ನಡೆದ ಸಂಘರ್ಷದ ವೇಳೆ ಚೀನಾ ಸೇನಾಪಡೆಯಕಮಾಂಡಿಂಗ್‌ ಅಧಿಕಾರಿ ಸೇರಿ 43 ಜನರು ಮೃತಪಟ್ಟಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿಮಾಡಿದೆ. ಆದರೆ, ಇದನ್ನು ಚೀನಾ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

ಹುತಾತ್ಮರ ವಿವರ
1. ಕರ್ನಲ್‌ ಬಿ.ಸುರೇಶ್‌ ಬಾಬು: ಹೈದರಾಬಾದ್‌ (ತೆಲಂಗಾಣ)
2. ನುದುರಾಮ್‌ ಸೊರೇನ್‌: ಮಯೂರ್‌ಬಂಜ್ (ಒಡಿಶಾ)
3.ಮನ್‌ದೀಪ್‌ ಸಿಂಗ್: ಪಟಿಯಾಲ(ಪಂಜಾಬ್)
4. ಸತ್ನಾಮ್‌ ಸಿಂಗ್‌: ಗುರುದಾಸ್‌ಪುರ (ಪಂಜಾಬ್)
5. ಕೆ.ಪಳನಿ: ಮದುರೈ (ತಮಿಳುನಾಡು)
6. ಸುನೀಲ್‌ ಕುಮಾರ್‌: ಪಟ್ನಾ (ಬಿಹಾರ)
7. ಬಿಪುಲ್‌ ರಾಯ್‌: ಮೀರತ್‌ (ಉತ್ತರಪ್ರದೇಶ)
8. ದೀಪಕ್‌ ಕುಮಾರ್‌: ರೆವಾ (ಮಧ್ಯಪ್ರದೇಶ)
9. ರಾಜೇಶ್‌ ಒರಾಂಗ್: ಬಿರ್ಘುಮ್‌ (ಪಶ್ಚಿಮ ಬಂಗಾಳ)
10. ಕುಂದನ್‌ ಕುಮಾರ್‌ ಓಜಾ: ಸಾಹೀಬ್‌ಗಂಜ್‌ (ಜಾರ್ಖಂಡ್‌)
11. ಗಣೇಶ್‌ ರಾಮ್‌: ಕಂಕೇರ್‌ (ಛತ್ತೀಸ್‌ಗಡ)
12. ಚಂದ್ರಕಾಂತ ಪ್ರಧಾನ್‌: ಕಂಧಮಾಲ್‌ (ಒಡಿಶಾ)
13. ಅಂಕುಶ್‌: ಹಮೀರ್‌ಪುರ (ಹಿಮಾಚಲ ಪ್ರದೇಶ)
14. ಗುರ್ಬಿಂದರ್‌: ಸಂಗ್ರೂರ್‌(ಪಂಜಾಬ್‌)
15. ಗುರ್ಜೆತ್‌ ಸಿಂಗ್: ಮಾನ್ಸಾ(ಪಂಜಾಬ್‌)
16. ಚಂದನ್‌ ಕುಮಾರ್: ಭೋಜ್ಪುರ(ಬಿಹಾರ)
17. ಕುಂದನ್ ಕುಮಾರ್‌: ಸಹಾರ್ಸ(ಬಿಹಾರ)
18. ಅಮನ್ ಕುಮಾರ್: ಸಂಸ್ತಿಪುರ್ (ಬಿಹಾರ)
19. ಜೈ ಕಿಶೋರ್‌ ಕುಮಾರ್: ವೈಶಾಲಿ (ಬಿಹಾರ)
20. ಗಣೇಶ್‌ ಹಂಸ್ದಾ:ಪೂರ್ವ ಸಿಂಗ್ಭೂಮ್ (ಜಾರ್ಖಂಡ್‌)

ಸಂಘರ್ಷಕ್ಕೆ ಸಂಬಂಧಿಸಿದಂತೆಭಾರತದವಿದೇಶಾಂಗ ಸಚಿವಎಸ್‌.ಜೈಶಂಕರ್‌ ಮತ್ತು ಚೀನಾದ ವಿದೇಶಾಂಗ ಸಚಿವವಾಂಗ್‌ ಯಿ ಇಂದು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.‘ಕಣಿವೆಯಲ್ಲಿ ನಡೆದ ಈ ಬೆಳವಣಿಗೆಯು ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ’ ಎಂದು ಜೈಶಂಕರ್‌ಎಚ್ಚರಿಸಿದ್ದಾರೆ. ಮುಂದುವರಿದು, ‘ಚೀನಾ ತನ್ನ ಕ್ರಮಗಳನ್ನು ಮತ್ತೊಮ್ಮೆ ಪರೀಶಿಲಿಸಬೇಕು ಮತ್ತು ಅದನ್ನು ಸರಿಪಡಿಸಿಕೊಳ್ಳುವುದು ಸದ್ಯ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.

‘ಗಾಲ್ವನ್‌ ಕಣಿವೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪ್ರಭುತ್ವ ಸಾಧಿಸಲು ಚೀನಾ ಪ್ರಯತ್ನಿಸುತ್ತಿತ್ತು. ಇದು ವಿವಾದದ ಮೂಲವಾಗಿದ್ದರೂ, ಅದು ಪೂರ್ವ ಜ್ಞಾನ ಹೊಂದಿದ್ದರೂ, ಯೋಜಿತ ಕ್ರಮಗಳನ್ನು ಕೈಗೊಂಡಿತ್ತು. ಇದು ಸಂಘರ್ಷ ಮತ್ತು ಅದರ ಪರಿಣಾಮವಾಗಿ ಸಂಭವಿಸಿದ ಸಾವು–ನೋವಿಗೆ ಕಾರಣವಾಗಿದೆ. ಇದು ನಮ್ಮ ಒಪ್ಪಂದಗಳ ಉಲ್ಲಂಘಿಸಿ, ಈಪ್ರದೇಶದಲ್ಲಿ ಅಧಿಕಾರ ಸ್ಥಾಪಿಸುವ ಚೀನಾದ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT