ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿರುವ ಬೆನ್ನಲ್ಲೇ, ವ್ಯಾಪಾರ ಮತ್ತು ಸಹಕಾರವನ್ನು ಮತ್ತಷ್ಟು ವೃದ್ಧಿಸಲು ಬಯಸುತ್ತಿರುವುದಾಗಿ ಉಭಯ ದೇಶಗಳು ಗುರುವಾರ ಹೇಳಿವೆ.

ಅದರಲ್ಲೂ, ಭಾರತದಿಂದ ಹೆಚ್ಚು ಸರಕುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಉಭಯ ದೇಶಗಳ ನಡುವಿನ ವ್ಯಾಪಾರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಉತ್ಸುಕವಾಗಿರುವುದಾಗಿ ರಷ್ಯಾ ಹೇಳಿದೆ.

ಇಂಧನ ಹಾಗೂ ರಕ್ಷಣಾ ಸಾಮಗ್ರಿಗಳ ಮಾರಾಟವಲ್ಲದೇ, ಭಾರತದೊಂದಿಗೆ ಇತರ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಪುಟಿನ್ ಅವರು ತಮ್ಮ ಎರಡು ದಿನಗಳ ಪ್ರವಾಸದ ವೇಳೆ ಒತ್ತು ನೀಡಲಿದ್ದಾರೆ.

ರಷ್ಯಾದಿಂದ ತೈಲ ಹಾಗೂ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಮೇಲೆ ಅಮೆರಿಕ ಒತ್ತಡ ಹೇರುತ್ತಿರುವ ನಡುವೆಯೇ, ರಷ್ಯಾ ಮತ್ತು ಭಾರತ ತಮ್ಮ ಮಧ್ಯದ ವ್ಯಾಪಾರವನ್ನು ವಿಸ್ತರಿಸಲು ಮುಂದಾಗಿರುವುದು ಗಮನಾರ್ಹ ಎಂದು ವಿಶ್ಲೇಷಿಸಲಾಗುತ್ತಿದೆ.

ರಫ್ತು ಹೆಚ್ಚಳಕ್ಕೆ ಕ್ರಮ–ಗೋಯೆಲ್: ‘ರಷ್ಯಾಕ್ಕೆ ವಿವಿಧ ಸರಕುಗಳ ರಫ್ತು ಹೆಚ್ಚಳ ಮಾಡಲು ಭಾರತ ಬಯಸುತ್ತದೆ. ಅದರಲ್ಲೂ ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳು, ಡೇಟಾ ಪ್ರೊಸೆಸಿಂಗ್ ಸಾಧನಗಳು, ಯಂತ್ರೋಪಕರಣಗಳು, ಕೈಗಾರಿಕೆಗಳಲ್ಲಿ ಬಳಸುವ ಸಲಕರಣೆಗಳು, ಜವಳಿ ಹಾಗೂ ಆಹಾರ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಒತ್ತು ನೀಡಲಾಗುವುದು’ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯೆಲ್ ಹೇಳಿದ್ದಾರೆ.

ಪುಟಿನ್ ಭೇಟಿ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ವ್ಯಾಪಾರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಕೈಗಾರಿಕೆಗಳಲ್ಲಿ ಬಳಸುವ ಬಿಡಿಭಾಗಗಳು, ಗ್ರಾಹಕ ವಸ್ತುಗಳಿಗೆ ರಷ್ಯಾದಲ್ಲಿ ಬಾರಿ ಬೇಡಿಕೆ ಇದೆ. ಭಾರತದ ಉದ್ಯಮಗಳಿಗೆ ರಷ್ಯಾದಲ್ಲಿ ಇರಬಹುದಾದ ಅವಕಾಶಗಳನ್ನು ಗುರುತಿಸಿ, ಪ್ರೋತ್ಸಾಹ ನೀಡಲಾಗುತ್ತದೆ’ ಎಂದೂ ಹೇಳಿದ್ದಾರೆ.

‘ದ್ವಿಪಕ್ಷೀಯ ವ್ಯಾಪಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಇದಕ್ಕಾಗಿ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಆಮದು ಮಾಡಿಕೊಳ್ಳಲು ರಷ್ಯಾ ಬಯಸುತ್ತದೆ’ ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ, ಕ್ರೆಮ್ಲಿನ್ನ ಡೆಪ್ಯುಟಿ ಚೀಫ್ ಆಫ್ ಸ್ಟಾಫ್ ಮ್ಯಾಕ್ಸಿಮ್ ಒರೆಶ್ಕಿನ್ ಹೇಳಿದ್ದಾರೆ.

ರಷ್ಯಾದ ಉದ್ದಿಮೆಗಳ ಪ್ರತಿನಿಧಿಗಳು ನಿರ್ದಿಷ್ಟ ಉದ್ದೇಶದೊಂದಿಗೆ ಭಾರತಕ್ಕೆ ಬಂದಿದ್ದಾರೆ. ಭಾರತದ ಸರಕುಗಳು ಹಾಗೂ ಸೇವೆಗಳ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಲು ರಷ್ಯಾ ಬಯಸುತ್ತದೆ
ಮ್ಯಾಕ್ಸಿಮ್ ಒರೆಶ್ಕಿನ್, ಕ್ರೆಮ್ಲಿನ್ನ ಡೆಪ್ಯುಟಿ ಚೀಫ್ ಆಫ್ ಸ್ಟಾಫ್

ಪ್ರಮುಖ ಅಂಶಗಳು

2030ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರ ₹8 ಲಕ್ಷ ಕೋಟಿಗೆ ಹೆಚ್ಚಿಸಲು ಭಾರತ ರಷ್ಯಾ ಗುರಿ * ಪ್ರಸಕ್ತ ಹಣಕಾಸು ವರ್ಷದಲ್ಲಿ ವ್ಯಾಪಾರ ₹2 ಲಕ್ಷ ಕೋಟಿ ತಲುಪಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಅವಧಿಯಲ್ಲಿ ಕಚ್ಚಾ ತೈಲ ಆಮದಿನಲ್ಲಿ ಇಳಿಕೆ ಕಂಡುಬಂದಿದೆ. ಅಮೆರಿಕ ವಿಧಿಸಿರುವ ನಿರ್ಬಂಧವೇ ಇದಕ್ಕೆ ಕಾರಣ

ತೈಲ ಕ್ಷಿಪಣಿ ವ್ಯವಸ್ಥೆಗಳು ಯುದ್ಧವಿಮಾನಗಳ ಮಾರಾಟಕ್ಕೆ ರಷ್ಯಾ ಒಲವು

ಭಾರತದಿಂದ ಕೃಷಿ ಉತ್ಪನ್ನಗಳು ಔಷಧಗಳು ದೂರಸಂಪರ್ಕ ಸಾಧನಗಳು ಐಟಿ ಸೇವೆಗಳ ಖರೀದಿಗೆ ರಷ್ಯಾಕ್ಕೆ ಆಸಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.