ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿ ಬ್ರಿಟನ್ ಸಂಸದರು ಚರ್ಚೆ ನಡೆಸಿರುವ ವಿಚಾರವಾಗಿ ದೆಹಲಿಯಲ್ಲಿರುವ ಬ್ರಿಟನ್ ರಾಯಭಾರಿ ಅಲೆಕ್ಸ್ ಎಲ್ಲಿಸ್‌ಗೆ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದೆ.

ರೈತರ ಪ್ರತಿಭಟನೆ ಕುರಿತು ಬ್ರಿಟನ್ ಸಂಸದರು ಚರ್ಚೆ ನಡೆಸಿರುವುದು ಭಾರತದ ರಾಜಕೀಯದ ಮೇಲೆ ಅವರು ಮಾಡಿರುವ ಹಸ್ತಕ್ಷೇಪ. ಬ್ರಿಟನ್‌ನ ಸಂಸದರು ಮತಬ್ಯಾಂಕ್ ರಾಜಕಾರಣ ಮಾಡಬಾರದು ಎಂದು ಸಚಿವಾಲಯ ಹೇಳಿದೆ.

ಇದರೊಂದಿಗೆ, ರೈತರ ಪ್ರತಿಭಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಟೀಕಿಸಿದ ವಿಷಯದಲ್ಲಿ ಸಮನ್ಸ್ ಪಡೆದ ಎರಡನೇ ರಾಯಭಾರಿಯಾಗಿದ್ದಾರೆ ಅಲೆಕ್ಸ್.

ಓದಿ:ರೈತರ ಪ್ರತಿಭಟನೆ ಕುರಿತ ಇಂಗ್ಲೆಂಡ್ ಸಂಸದರ ಚರ್ಚೆ ಏಕಪಕ್ಷೀಯ: ಭಾರತ

ಕೆನಡಾ ರಾಯಭಾರಿಗೆ ಡಿಸೆಂಬರ್ 4ರಂದು ಸಮನ್ಸ್ ನೀಡಲಾಗಿತ್ತು. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇತರ ಸಚಿವರು ನೀಡಿರುವ ಹೇಳಿಕೆ ಭಾರತದ ಆಂತರಿಕ ವಿಚಾರದಲ್ಲಿನ ಸ್ಪಷ್ಟ ಹಸ್ತಕ್ಷೇಪ. ಇದನ್ನು ಒಪ್ಪಲಾಗದು ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.

ಬ್ರಿಟನ್ ಸಂಸದರ ನಡೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಮಂಗಳವಾರವೇ ಖಂಡಿಸಿತ್ತು.

‘ಬ್ರಿಟನ್ ಸಂಸದರ ಚರ್ಚೆಯು ಏಕಪಕ್ಷೀಯವಾಗಿದ್ದುದಲ್ಲದೆ ಸುಳ್ಳು ಪ್ರತಿಪಾದನೆಗಳಿಂದ ಕೂಡಿತ್ತು. ಸಮತೋಲಿತ ಚರ್ಚೆ ನಡೆಸುವ ಬದಲು ಸುಳ್ಳು ಪ್ರತಿಪಾದನೆಗಳು, ದೃಢೀಕೃತವಲ್ಲದ ಅಂಶಗಳೇ ಮುಖ್ಯವಾಗಿದ್ದುದಕ್ಕೆ ವಿಷಾದಿಸುತ್ತೇವೆ’ ಎಂದು ಹೈಕಮಿಷನರ್ ಕಚೇರಿ ಪ್ರಕಟಣೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.