ನವದೆಹಲಿ: ಭಾರತ– ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರದ ಚೌಕಟ್ಟಿನಲ್ಲಿ ಭಾರತವು ಕೃಷಿ, ಡೇರಿ ಉತ್ಪನ್ನಗಳನ್ನು ಪೂರ್ಣವಾಗಿ ರಕ್ಷಿಸುವ ಮೂಲಕ ಭಾರತದ ಹಿತವನ್ನು ಕಾಯ್ದುಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದರು.

ಹಾಲು, ಚೀಸ್, ಮೆಕ್ಕೆಜೋಳ, ಗೋಧಿ, ಅಕ್ಕಿ, ಸೋಯಾ, ಕೋಳಿ, ಎಥೆನಾಲ್ (ಇಂಧನ), ತಂಬಾಕು, ಕೆಲ ತರಕಾರಿಗಳು ಮತ್ತು ಮಾಂಸವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ. ಒಪ್ಪಂದದ ಅಡಿಯಲ್ಲಿ, ಈ ಸರಕುಗಳ ಮೇಲೆ ಅಮರಿಕಕ್ಕೆ ಯಾವುದೇ ಸುಂಕ ರಿಯಾಯಿತಿ ನೀಡಲಾಗಿಲ್ಲ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈ ಮೂಲಕ ರೈತರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಗ್ರಾಮೀಣ ಜೀವನೋಪಾಯವನ್ನು ಸಂರಕ್ಷಿಸುವ ಭಾರತದ ಬದ್ಧತೆಯನ್ನು ಈ ಒಪ್ಪಂದ ಪ್ರತಿಬಿಂಬಿ ಸುತ್ತದೆ ಎಂದು ಅವರು ಹೇಳಿದರು.

‘ಭಾರತೀಯ ಕೈಗಾರಿಕೆಗಳಿಗೆ, ತಂತ್ರಜ್ಞಾನ ಅಭಿವೃದ್ಧಿಪಡಿಸುವವರಿಗೆ, ಕಾರ್ಮಿಕರಿಗೆ ವ್ಯಾಪಕ ರಫ್ತು ಅವಕಾಶಗಳ ಬಾಗಿಲನ್ನು ಈ ಒಪ್ಪಂದ ತೆರೆಯುತ್ತದೆ. ಇದೇ ವೇಳೆ ಭಾರತವು ಅತ್ಯಂತ ಸೂಕ್ಷ್ಮ ಆಹಾರ ವಲಯವನ್ನು ರಕ್ಷಿಸುವ ಸುಂಕ ರಚನೆ ಮಾಡಿಕೊಂಡಿದೆ’ ಎಂದು ಅವರು ಪ್ರತಿಪಾದಿಸಿದರು.

ಈ ಒಪ್ಪಂದವೇ ಅಲ್ಲದೆ, ಇತರ ದೇಶಗಳ ಜತೆಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿಯೂ (ಎಫ್ಟಿಎ) ಭಾರತವು ಕೃಷಿ ಮತ್ತು ಡೇರಿ ಉತ್ಪನ್ನಗಳ ಮೇಲೆ ಯಾವುದೇ ಆಮದು ಸುಂಕ ರಿಯಾಯಿತಿಗಳನ್ನು ನೀಡಿಲ್ಲ. ಇತ್ತೀಚೆಗೆ ಐರೋಪ್ಯ ಒಕ್ಕೂಟ (ಇ.ಯು), ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳ ಜತೆಗೆ ಮಾಡಿಕೊಂಡ ಎಫ್ಟಿಎಗಳನ್ನು ಅಂತಿಮಗೊಳಿಸಲಾಗಿದ್ದು, ಕೃಷಿ, ಡೇರಿ ಉತ್ಪನ್ನಗಳನ್ನು ರಕ್ಷಿಸಲಾಗಿದೆ ಎಂದು ಅವರು ವಿವರಿಸಿದರು.

ಶೂನ್ಯ ಸುಂಕದಲ್ಲಿ...: ಈ ಒಪ್ಪಂದದ ಮೊದಲ ಹಂತದ ಅಡಿಯಲ್ಲಿ ಭಾರತದಿಂದ ಸುಮಾರು 44 ಬಿಲಿಯನ್ ಡಾಲರ್ನಷ್ಟು ಮೌಲ್ಯದ ರಫ್ತುಗಳು ಶೂನ್ಯ ಸುಂಕದಲ್ಲಿ ಅಮೆರಿಕ ಪ್ರವೇಶಿಸಲಿವೆ ಎಂದು ಅವರು ಹೇಳಿದರು.

ಸುಮಾರು 30 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಸರಕುಗಳು ಶೇ 18ರಷ್ಟು ಸುಂಕವನ್ನು ಆಕರ್ಷಿಸುತ್ತವೆ. 12 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ (ಉಕ್ಕು, ತಾಮ್ರ, ಕೆಲ ಆಟೊಮೊಬೈಲ್ ಭಾಗಗಳು) ಎಂದು ಅವರು ತಿಳಿಸಿದರು.
.ಚರ್ಮ, ಕೂದಲು ಸದೃಢವಾಗಲು 7 ದಿನಗಳ ಆಹಾರ ಯೋಜನೆ ಹೀಗಿರಲಿ.ಇಂದಿನ ಯುವಕರು ಪಂಥ ರಹಿತ ಸಮಾಜಮುಖಿ ಕವಿತೆಗಳನ್ನು ರಚಿಸಿ: ತಾಯರಾಜ್ ಮರ್ಚಟಾಳ್.
ದ್ವಿಪಕ್ಷೀಯ ವ್ಯಾಪಾರ-ವಹಿವಾಟು

2021–25ರ ಅವಧಿಯಲ್ಲಿ ಭಾರತದ ಅತಿದೊಡ್ಡ ವ್ಯಾಪಾರದ ಪಾಲುದಾರ ದೇಶ ಅಮೆರಿಕ. ಭಾರತದ ಒಟ್ಟು ರಫ್ತಿನಲ್ಲಿ ಅಮೆರಿಕದ ಪಾಲು ಶೇ 18 ಮತ್ತು ಆಮದಿನಲ್ಲಿ ಶೇ 6.22.

ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2024–25ರಲ್ಲಿ 186 ಬಿಲಿಯನ್ ಡಾಲರ್ಗೆ (86.5 ಬಿಲಿಯನ್ ಡಾಲರ್ ರಫ್ತು ಮತ್ತು 45.3 ಬಿಲಿಯನ್ ಡಾಲರ್ ಆಮದು) ತಲುಪಿತ್ತು.

2024ರಲ್ಲಿ ಅಮೆರಿಕವು ಭಾರತಕ್ಕೆ 1.6 ಬಿಲಿಯನ್ ಡಾಲರ್ನಷ್ಟು ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದರಲ್ಲಿ ಬಾದಾಮಿ (868 ಮಿಲಿಯನ್ ಡಾಲರ್), ಪಿಸ್ತಾ (121 ಮಿಲಿಯನ್ ಡಾಲರ್), ಸೇಬು (21 ಮಿಲಿಯನ್ ಡಾಲರ್), ಎಥೆನಾಲ್ (266 ಮಿಲಿಯನ್ ಡಾಲರ್) ಸೇರಿವೆ.

ಭಾರತವು ಮುಂದಿನ ನಾಲ್ಕು ವರ್ಷಗಳಲ್ಲಿ ಕೃಷಿ, ಸಾಗರ ಉತ್ಪನ್ನಗಳು, ಆಹಾರ, ಪಾನೀಯ ಸಂಯೋಜನೆ ರಫ್ತನ್ನು 100 ಬಿಲಿಯನ್ ಡಾಲರ್ಗೆ ತಲುಪಿಸುವ ಗುರಿಯನ್ನು ಹೊಂದಿದೆ. ಈ ಪೈಕಿ ಚಹಾ, ಕಾಫಿ, ಅಕ್ಕಿ, ಕೆಲ ಧಾನ್ಯಗಳು, ಮಸಾಲೆ ಪದಾರ್ಥಗಳು, ಗೋಡಂಬಿ, ಊಟದ ಎಣ್ಣೆ, ಎಣ್ಣೆ ಬೀಜಗಳು, ಹಣ್ಣುಗಳು, ತರಕಾರಿಗಳು ಭಾರತದ ಪ್ರಮುಖ ರಫ್ತುಗಳು.

ಐಷಾರಾಮಿ ದ್ವಿಚಕ್ರ ವಾಹನಗಳಿಗೆ ಶೂನ್ಯ ಸುಂಕ

ಮಧ್ಯಂತರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಅಮೆರಿಕದ 800–1,600 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಐಷಾರಾಮಿ ದ್ವಿಚಕ್ರ ವಾಹನಗಳು ಶೂನ್ಯ ಸುಂಕದೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಲಿವೆ.

ಈ ಒಪ್ಪಂದದಿಂದ ಅಮೆರಿಕದ ಪ್ರಮುಖ ವಾಹನ ತಯಾರಿಕಾ ಕಂಪನಿ ಹಾರ್ಲೆ ಡೇವಿಡ್ಸನ್ನಂತಹ ಕಂಪನಿಗಳಿಗೆ ಪ್ರಯೋಜನ ಆಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರವು 1,600 ಸಿಸಿ ಎಂಜಿನ್ ಸಾಮರ್ಥ್ಯದವ ರೆಗಿನ ದ್ವಿಚಕ್ರ ವಾಹನಗಳ ಮೇಲಿನ ಆಮದು ಸುಂಕವನ್ನು ಶೇ 50ರಿಂದ ಶೇ 40ಕ್ಕೆ ಇಳಿಸಿತ್ತು. 1,600 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳ ಮೇಲಿನ ಸುಂಕವನ್ನು ಶೇ 50ರಿಂದ ಶೇ 30ಕ್ಕೆ ಇಳಿಸಿತ್ತು.

ಭಾರತ ಮತ್ತು ಅಮೆರಿಕದ ಒಪ್ಪಂದ ಜಾರಿಗೆ ಬಂದ ದಿನ ಈ ಸುಂಕ ರದ್ದತಿ ಜಾರಿ ಆಗಲಿದೆ ಎಂದು ತಿಳಿಸಿದ್ದಾರೆ.

ಭಾರತವು, ಉನ್ನತ ದರ್ಜೆಯ ಪ್ರೀಮಿಯಂ ದ್ವಿಚಕ್ರ ವಾಹನಗಳಿಗೆ ಸಣ್ಣ ಮಾರುಕಟ್ಟೆಯಾಗಿದ್ದು, ಈ ಪೈಕಿ ಅಮೆರಿಕದ ಪಾಲು ತೀರಾ ಕಡಿಮೆ.

ಒಪ್ಪಂದದ ಅಡಿಯಲ್ಲಿ ಭಾರತವು, ಅಮೆರಿಕದ ಕಾರುಗಳ ಆಮದಿನ ಮೇಲೆ ಸಹ ಸುಂಕ ಇಳಿಕೆ ಮಾಡಿದೆ. 2,500 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಡೀಸೆಲ್ ವಾಹನಗಳು ಮತ್ತು 3 ಸಾವಿರ ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಹೊಂದಿರುವ ಪೆಟ್ರೋಲ್ ವಾಹನಗಳ ಮೇಲೆ ಸುಂಕ ರಿಯಾಯಿತಿ ನೀಡಿದೆ ಎಂದು ತಿಳಿಸಿದ್ದಾರೆ.
.ಹೈಕಮಾಂಡ್ ಹೈಕಮಾಂಡೇ.. ಸದ್ಯ ಅವರು ಏನೂ ಹೇಳಿಲ್ಲ: ಯತೀಂದ್ರ ಸಿದ್ದರಾಮಯ್ಯ.ಕಾಗದರಹಿತ ಶಾಸಕಾಂಗದತ್ತ ಬಿಹಾರ ವಿಧಾನಸಭೆ: ಕಾರ್ಯಕ್ರಮಕ್ಕೆ ನಿತೀಶ್ ಕುಮಾರ್ ಗೈರು.54 ನಿಗಮ–ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ.ಸೇನಾ ಕ್ಯಾಂಟೀನ್ ಮಾದರಿಯಲ್ಲಿ ‘ಎಂಎಸ್ಐಎಲ್ ಸ್ಟೋರ್’: ಸಚಿವ ಎಂ.ಬಿ. ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.