‘ಆಸಕ್ತಿ ಇಲ್ಲದಿದ್ದರೆ ಖರೀದಿಸಬೇಡಿ’
‘ಭಾರತದಿಂದ ತೈಲ ಅಥವಾ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸಲು ನಿಮಗೆ ಆಸಕ್ತಿ ಇಲ್ಲದಿದ್ದರೆ, ಅದನ್ನು ಖರೀದಿಸಬೇಡಿ. ಖರೀದಿಸುವಂತೆ ಯಾರೂ ನಿಮ್ಮನ್ನೂ ಒತ್ತಾಯಿಸುವುದಿಲ್ಲ. ಆದರೆ ಯುರೋಪ್ ಖರೀದಿಸುತ್ತಿದೆ’ ಎಂದು ಅವರು ಉತ್ತರಿಸಿದರು. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹಳಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಚೀನಾದ ಜತೆಗೆ ಭಾರತದ ಸಂಬಂಧ ಸುಧಾರಿಸುತ್ತಿದೆಯಾ ಎಂಬ ಪ್ರಶ್ನೆಗೆ, ‘ಅದು ತಪ್ಪು ವಿಶ್ಲೇಷಣೆ’ ಎಂದು ಅವರು ಪ್ರತಿಕ್ರಿಯಿಸಿದರು.