ನವದೆಹಲಿ: ಭಾರತದಿಂದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದು, ಕಳೆದ ದಶಕದಲ್ಲಿ 34 ಪಟ್ಟು ಹೆಚ್ಚಾಗಿದೆ.

ಭಾರತವು 2024-25ರಲ್ಲಿ ₹23,622 ಕೋಟಿ ಮೌಲ್ಯದ ರಕ್ಷಣಾ ಸರಕುಗಳನ್ನು ರಫ್ತು ಮಾಡಿದೆ. 2013-14ರಲ್ಲಿ ಕೇವಲ ₹686 ಕೋಟಿಗಳಷ್ಟಿದ್ದ ರಕ್ಷಣಾ ಸಾಮಗ್ರಿಗಳ ರಫ್ತು 34 ಪಟ್ಟು ಹೆಚ್ಚಳವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಕಚೇರಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.

ಸ್ವಾವಲಂಬಿ ಅಥವಾ ಆತ್ಮನಿರ್ಭರ ಭಾರತ್ನ ಮನೋಭಾವದಿಂದ ನಡೆಸಲ್ಪಡುವ ಭಾರತದ ರಕ್ಷಣಾ ವಲಯವು ಹಿಂದೆಂದಿಗಿಂತಲೂ ಬಲವಾಗಿ ಬೆಳೆಯುತ್ತಿದೆ ಎಂದು ರಕ್ಷಣಾ ಸಚಿವರ ಕಚೇರಿ ಪ್ರತಿಪಾದಿಸಿದೆ.

'ಆತ್ಮನಿರ್ಭರ' ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳ ಭಾಗವಾಗಿ, ಭಾರತೀಯ ರಕ್ಷಣಾ ಸಾಮಗ್ರಿ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಲು, ರಫ್ತುಗಳನ್ನು ಹೆಚ್ಚಿಸಲು, ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯಲ್ಲಿ ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರವು ವಿವಿಧ ವಲಯಗಳಲ್ಲಿ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ (ಪಿಎಲ್ಐ) ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ.

ಸರ್ಕಾರವು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಒತ್ತು ನೀಡಿರುವುದರಿಂದ, ರಕ್ಷಣಾ ಉತ್ಪಾದನೆಯು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿದೆ. ರಕ್ಷಣಾ ಉತ್ಪಾದನೆಯಲ್ಲಿನ ಈ ಏರಿಕೆಯು ಕಳೆದ ವರ್ಷಗಳಲ್ಲಿ ಪ್ರಮುಖ ರಕ್ಷಣಾ ಉತ್ಪಾದನಾ ಸಾರ್ವಜನಿಕ ಉದ್ದಿಮೆಗಳಲ್ಲಿ ಹೂಡಿಕೆದಾರರಿಗೆ ಗಣನೀಯ ಲಾಭವನ್ನು ತಂದುಕೊಟ್ಟಿದೆ.

ಸರ್ಕಾರವು ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನಾ ವಲಯದಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. ಗಮನಾರ್ಹವಾಗಿ, ಅನೇಕ ಜಾಗತಿಕ ಕಂಪನಿಗಳು ಭಾರತದೊಂದಿಗೆ ನಿರ್ಣಾಯಕ ರಕ್ಷಣಾ ಮತ್ತು ಏರೋಸ್ಪೇಸ್ ಜ್ಞಾನವನ್ನು ಹಂಚಿಕೊಂಡಿವೆ ಅಥವಾ ಹಂಚಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿವೆ.

ರಕ್ಷಣಾ ಸಚಿವಾಲಯದ ದತ್ತಾಂಶದ ಪ್ರಕಾರ, ಇತ್ತೀಚೆಗೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ಸುಮಾರು 80 ದೇಶಗಳಿಗೆ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳು, ಬಿಡಿ ಭಾಗಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಸ್ತುಗಳನ್ನು ರಫ್ತು ಮಾಡಲಾಗಿದೆ.

ಸರ್ಕಾರವು 2029ರ ವೇಳೆಗೆ ವಾರ್ಷಿಕ ₹50,000 ಕೋಟಿ ಮೌಲ್ಯದ ರಫ್ತು ಗುರಿಯನ್ನು ಹೊಂದಿದೆ. ಹೀಗಾಗಿ. ಅದು ತನ್ನ ಜಾಗತಿಕ ಹೆಜ್ಜೆಗುರುತನ್ನು ಬಲಪಡಿಸುತ್ತಿದೆ.

ಇತ್ತೀಚೆಗೆ ತಮ್ಮ ಗರಿಷ್ಠ ಮಟ್ಟದಿಂದ ಕುಸಿದಿದ್ದ ಭಾರತೀಯ ರಕ್ಷಣಾ ವಲಯದ ಷೇರುಗಳು ಕಳೆದ ವಾರಗಳಲ್ಲಿ ಮತ್ತೆ ಗಗನಕ್ಕೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.