
ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವುದು ಸಮಯ ಪರಿಪಾಲನೆಯನ್ನು ಮತ್ತೆ ಹಳಿಗೆ ತರುವುದು ತಕ್ಷಣದ ಗುರಿಯಾಗಿದೆಪೀಟರ್ ಎಲ್ಬರ್ಸ್ ಇಂಡಿಗೊ ಸಿಇಒ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರ ಆಕ್ರೋಶ
ಇಂಡಿಗೊ ಈಗ ಭೀಕರ ಸ್ಥಿತಿಯಲ್ಲಿದೆ. ಒಂದಾದ ನಂತರ ಒಂದರಂತೆ ವಿಮಾನಗಳ ಹಾರಾಟ ರದ್ದುಗೊಂಡಿದೆ. ಪ್ರಯಾಣಿಕರು ಸಂಸ್ಥೆಯ ಸಿಬ್ಬಂದಿ ಜೊತೆ ಜಗಳಕ್ಕೆ ಇಳಿದಿದ್ದಾರೆ. ಹಾರಾಟದ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಇಂದು ಪ್ರಯಾಣಿಸುವ ಉದ್ದೇಶವಿದ್ದರೆ, ನಿಲ್ದಾಣಕ್ಕೆ ಬರಬೇಡಿಅರುಣ್ ಪ್ರಭುದೇಸಾಯಿ,ಅರ್ಮ್ಕೊಸ್ ಮಿಡಿಯಾ ಸಂಸ್ಥಾಪಕ

ಅರುಣ್ ಪ್ರಭುದೇಸಾಯಿ
ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿ, ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಪ್ರಯಾಣದರ, ಕಳಪೆ ಮೂಲಸೌಕರ್ಯ, ವಿಮಾನ ರದ್ದತಿಗಳು ಪುನರಾವರ್ತನೆಯಾಗುತ್ತಿವೆ. ವಿಮಾನಯಾನ ಸಚಿವರು ಈ ಕುರಿತು ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಬಹುದು ಎಂದು ನಿರೀಕ್ಷಿಸುತ್ತೇನೆಪ್ರಿಯಾಂಕ ಚತುರ್ವೇದಿ,ಶಿವಸೇನಾ (ಯುಬಿಟಿ) ರಾಜ್ಯಸಭಾ ಸಂಸದೆ

ಪ್ರಿಯಾಂಕ ಚತುರ್ವೇದಿ
ಶೇಕಡ 60ರಷ್ಟು ಮಾರುಕಟ್ಟೆಯ ಪಾಲು ಜವಾಬ್ದಾರಿಯಿಂದ ಬರುತ್ತದೆ ಹೊರತು ನೆಪದಿಂದ ಅಲ್ಲ. ಇಂಡಿಗೊ ಸಂಸ್ಥೆಯು ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ. ಈ ಕುರಿತು ಡಿಜಿಸಿಎ ಕಠಿಣವಾದ ಕ್ರಮ ಕೈಗೊಳ್ಳಬೇಕುಸತ್ಯಜಿತ್ ತಂಬೆ ಪಾಟೀಲ್, ಪಕ್ಷೇತರ ಶಾಸಕ ಮಹಾರಾಷ್ಟ್ರ

ಸತ್ಯಜಿತ್ ತಂಬೆ ಪಾಟೀಲ್
ಇಂಡಿಗೊ ವಿಮಾನವು ಪುಣೆಯ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಸೃಷ್ಟಿಸಿದೆ. ಪ್ರಯಾಣಿಕರಿಗೆ ಯಾವುದೇ ಮಾಹಿತಿ ಇಲ್ಲ. ಸಿಬ್ಬಂದಿ ಸ್ಪಂದಿಸುತ್ತಿಲ್ಲ ವಿಮಾನ ಹಾರಾಟದ ಬಗ್ಗೆ ಖಾತರಿಯಿಲ್ಲ-ಡಾ. ಪ್ರಶಾಂತ್ ಪನ್ಸಾರೆ ಸಂಸ್ಥಾಪಕ ರುಬಿಸ್ಕೇಪ್.ಕಾಮ್

ಡಾ. ಪ್ರಶಾಂತ್ ಪನ್ಸಾರೆ
ಇಂಡಿಗೊ ಸಂಸ್ಥೆಯು ಪುಣೆ ವಿಮಾನನಿಲ್ದಾಣವನ್ನು ರೈಲು ನಿಲ್ದಾಣವಾಗಿ ಪರಿವರ್ತಿಸಿದೆ-ರಿಶಿಕೇಷ್ ತಕ್ಸಲೆ ಕಂಟೆಟ್ ತಂತ್ರಜ್ಞ

ರಿಶಿಕೇಷ್ ತಕ್ಸಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.