ಗುರುಗ್ರಾಮ: ಉತ್ತರಪ್ರದೇಶದ ಇಬ್ಬರು ಯುವಕರ ಮಾನವ ಕಳ್ಳಸಾಗಣೆ ಆರೋಪದ ಮೇಲೆ ಯುಟ್ಯೂಬರ್ ಹಾಗೂ ಇನ್ಸ್ಟಾಗ್ರಾಂ ರೀಲ್ಸ್ ಮೇಕರ್ ಬಲ್ವಂತ್ ಕಟಾರಿಯಾ ಅಲಿಯಾಸ್ ಬಾಬಿ ಕಟಾರಿಯಾನನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಬಜ್ಗೇರಾ ಪೊಲೀಸ್ ಠಾಣೆಯಲ್ಲಿ ಕಟಾರಿಯಾ ವಿರುದ್ಧ ದೂರು ದಾಖಲಾಗಿತ್ತು.

ಯುಟ್ಯೂಬ್ನಲ್ಲಿ ಕಟಾರಿಯಾ ಎಂ.ಬಿ.ಕೆ ಚಾನೆಲ್ ನಡೆಸುತ್ತಿದ್ದಾರೆ. ಇದರಲ್ಲಿ ವಿದೇಶದಲ್ಲಿ ಕೆಲಸ ಕೊಡಿಸುವ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ಇಬ್ಬರು ಉತ್ತರಪ್ರದೇಶದ ಯುವಕರು ಕಟಾರಿಯಾನನ್ನು ಸಂಪರ್ಕಿಸಿದ್ದರು.

ಕಟಾರಿಯಾ ಇವರಿಂದ ತಲಾ ₹ 2 ಲಕ್ಷ ಪಡೆದು ವಿಯಾಟ್ನಂ ದೇಶಕ್ಕೆ ಕಳುಹಿಸಿಕೊಟ್ಟಿದ್ದರು. ಅಲ್ಲಿನ ಹೊಟೇಲ್ನಲ್ಲಿ ಇವರನ್ನು ಅಕ್ರಮವಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದರು.

ನಂತರ ಆ ಯುವಕರು ಸೈಬರ್ ಕ್ರೈಂಗೆ ದೂರು ನೀಡಿದ್ದರು. ಯುವಕರನ್ನು ರಕ್ಷಿಸಿದ್ದ ಪೊಲೀಸರು ಭಾರತಕ್ಕೆ ಕಳುಹಿಸಿ ಕೊಟ್ಟಿದ್ದರು. ಈ ಯುವಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಟಾರಿಯಾನನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.