ನವದೆಹಲಿ: ಅಮೆರಿಕವು ತನ್ನ ನೆಲದಲ್ಲಿ ಅಕ್ರಮವಾಗಿ ನೆಲಸಿರುವ ಭಾರತೀಯರನ್ನು ನಡೆಸಿಕೊಂಡ ರೀತಿ, ‘ಭಾರತ ಮತ್ತು ಭಾರತೀಯರಿಗೆ ಮಾಡಿರುವ ಅವಮಾನ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಟೀಕಿಸಿದ್ದಾರೆ.

‘ಪ್ರಯಾಣದ ಉದ್ದಕ್ಕೂ ತಮ್ಮ ಕೈ– ಕಾಲುಗಳಿಗೆ ಕೋಳ ತೊಡಿಸಲಾಗಿತ್ತು. ಅಮೃತಸರ ತಲುಪಿದ ಬಳಿಕವಷ್ಟೇ ಕೋಳವನ್ನು ಬಿಚ್ಚಿದ್ದಾರೆ’ ಎಂದು ಅಮೆರಿಕದಿಂದ ವಾಪಸಾದ ಕೆಲವು ವಲಸಿಗರು ಹೇಳಿಕೊಂಡಿದ್ದರು.

‘ಭಾರತದ ವಲಸಿಗರನ್ನು ಅಮೆರಿಕವು ನಡೆಸಿಕೊಂಡ ರೀತಿಗೆ ಪ್ರತಿಭಟಿಸುತ್ತಿದ್ದೇವೆ. ತನ್ನ ದೇಶದಲ್ಲಿ ಅಕ್ರಮವಾಗಿ ಇರುವವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಹಕ್ಕು ಅಮೆರಿಕಕ್ಕೆ ಇದೆ. ಅವರು ಭಾರತೀಯರು ಎಂಬುದು ಸಾಬೀತಾದರೆ, ಅವರನ್ನು ಸ್ವೀಕರಿಸುವುದು ನಮ್ಮ ಜವಾಬ್ದಾರಿಯೂ ಹೌದು. ಆದರೆ, ಅವರ ಕೈಗಳಿಗೆ ಕೋಳ ತೊಡಿಸಿ, ಸೇನಾ ವಿಮಾನದಲ್ಲಿ ಕಳುಹಿಸುವುದನ್ನು ಒಪ್ಪಲಾಗದು. ಇದನ್ನು ಖಂಡಿತವಾಗಿಯೂ ಪ್ರತಿಭಟಿಸಬೇಕು’ ಎಂದಿದ್ದಾರೆ.

ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ ಸರ್ಕಾರವು ಅಮೆರಿಕಕ್ಕೆ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೋದಿ ಮತ್ತು ಟ್ರಂಪ್ ತುಂಬಾ ಒಳ್ಳೆಯ ಸ್ನೇಹಿತರು ಎಂದು ಹೇಳಲಾಗುತ್ತಿದೆ. ಈ ಘಟನೆ (ವಲಸಿಗರಿಗೆ ಅವಮಾನ) ನಡೆಯಲು ಮೋದಿ ಅವಕಾಶ ನೀಡಿದ್ದೇಕೆ?
ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಸಂಸದೆ
.ಮೊದಲ ಹಂತದಲ್ಲಿ ಅಮೆರಿಕದಿಂದ ವಾಪಸಾದ 104 ಭಾರತೀಯರು.ಅಮೆರಿಕದಲ್ಲಿ ವಲಸೆ ಕಾನೂನು ಬಿಗಿ: ಭಾರತದ ಅಕ್ರಮ ವಲಸಿಗರ ಗಡೀಪಾರು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.