ತಿರುವನಂತಪುರ: 15 ವರ್ಷದ ಬಾಲಕನಿಗೆ ಐಎಸ್ಐಎಸ್ ಸೇರುವಂತೆ ಉಪದೇಶಿಸಿ, ಒತ್ತಡ ಹೇರುತ್ತಿದ್ದ ಆರೋಪದಡಿ ಬಾಲಕನ ತಾಯಿ ಹಾಗೂ ಮಲತಂದೆ ವಿರುದ್ಧ ತಿರುವನಂತಪುರದಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ ತಾಯಿ ಹಾಗೂ ಮಲತಂದೆ ಸದ್ಯ ಬ್ರಿಟನ್ನಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಅವರ ವಿರುದ್ಧ ತಿರುವನಂತಪುರ ಸಮೀಪದ ವೆಂಜರಮೂಡು ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ನವೆಂಬರ್ 14ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಈ ಪ್ರಕರಣ ಕುರಿತಂತೆ ಕೇರಳ ಪೊಲೀಸರಿಂದ ಮಾಹಿತಿ ಕಲೆ ಹಾಕಿವೆ ಎಂದೂ ತಿಳಿದುಬಂದಿದೆ.

ಪ್ರಕರಣವೇನು?:

ಬಾಲಕನ ತಾಯಿ ತಿರುವನಂತಪುರದವರು. ಪಟ್ಟಿನಂತಿಟ್ಟ ಜಿಲ್ಲೆ ವ್ಯಕ್ತಿಯೊಂದಿಗೆ ವಿವಾಹದ ಬಳಿಕ ದಂಪತಿಯು ಮಗನೊಂದಿಗೆ ಬ್ರಿಟನ್ಗೆ ತೆರಳಿದ್ದರು.

‘ಬಳಿಕ, ಮಹಿಳೆಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ತಮ್ಮ ಕುಟುಂಬದ ಸ್ನೇಹಿತನನ್ನೇ ವರಿಸಿದರು. ನಂತರ ಮೊದಲ ಪತಿಯಿಂದ ದೂರವಾದರು. ಬಾಲಕ ತನ್ನ ತಾಯಿ ಹಾಗೂ ಮಲತಂದೆಯೊಂದಿಗೆ ಬ್ರಿಟನ್ನಲ್ಲಿಯೇ ವಾಸಿಸುತ್ತಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ಮಲತಂದೆಯು ಬಾಲಕನಿಗೆ ಕಳೆದೆರಡು ವರ್ಷಗಳಿಂದ ಇಸ್ಲಾಂ ಉಗ್ರವಾದ ಕುರಿತ ವಿಡಿಯೊಗಳನ್ನು ತೋರಿಸುತ್ತಿದ್ದ. ಐಎಸ್ಐಎಸ್ ಸೇರುವಂತೆ ಉಪದೇಶ ಮಾಡುತ್ತಿದ್ದ ಹಾಗೂ ತಾಯಿ ಕೂಡ ಇದಕ್ಕೆ ಬೆಂಬಲ ನೀಡುತ್ತಿದ್ದರು’.

‘ಕೇರಳಕ್ಕೆ ಮರಳಿದ ಬಾಲಕನನ್ನು ಧಾರ್ಮಿಕ ಅಧ್ಯಯನ ಕೇಂದ್ರಯೊಂದಕ್ಕೆ ಸೇರಿಸಲಾಯಿತು. ಬಾಲಕನ ಅಸಹಜ ನಡವಳಿಕೆ ಗಮನಿಸಿದ ಕೇಂದ್ರದ ಸಿಬ್ಬಂದಿ, ಈ ಕುರಿತು ಬಾಲಕನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರು ಪೊಲೀಸರಿಗೆ ದೂರು ನೀಡಿದರು’ ಎಂದು ತಿಳಿಸಿದ್ದಾರೆ.

‘ಬಾಲಕನ ಹೇಳಿಕೆಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಹೀಗಾಗಿ ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ ಇಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.