ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20 ಅಧ್ಯಕ್ಷತೆಯ ಕುರಿತು ಸಂಸದೀಯ ಸಲಹಾ ಸಮಿತಿಗೆ ವಿವರಿಸಿದ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು ಭಾರತದ ಜಿ20 ಅಧ್ಯಕ್ಷತೆಯ ಕುರಿತು ಸಂಸದೀಯ ಸಲಹಾ ಸಮಿತಿಗೆ ವಿವರಿಸಿದರು.
Published 8 ಅಕ್ಟೋಬರ್ 2023, 5:48 IST
Last Updated 8 ಅಕ್ಟೋಬರ್ 2023, 5:48 IST
ಅಕ್ಷರ ಗಾತ್ರ

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ನಾಯಕರ ಶೃಂಗಸಭೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸಂಸದೀಯ ಸಲಹಾ ಸಮಿತಿಗೆ ವಿವರಿಸಿದರು.

ಜಿ20 ಯಶಸ್ಸಿಗೆ ಶ್ಲಾಘನೆ ವ್ಯಕ್ತವಾಗಿದೆ. ಇದರಲ್ಲಿ ಸಮಾಲೋಚನಾ ಸಮಿತಿಯ ಸದಸ್ಯರ ಪಾತ್ರ ದೊಡ್ಡದು. ಈ ವಿಚಾರವನ್ನು ಹೇಳಲು ಸಂತೋಷವಾಗುತ್ತಿದೆ. ಇದು ಸಾರ್ವಜನಿಕರ ಪಾಲ್ಗೊಳ್ಳುವಿಕೆ (ಜನ್ ಭಾಗಿದರಿ) ಧನಾತ್ಮಕ ಪರಿಣಾಮ ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಶಿವಸೇನಾ (ಯುಬಿಟಿ) ನಾಯಕಿ ಮತ್ತು ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಜೈಶಂಕರ್ ಅವರು ಭಾರತದ ಜಿ20 ಅಧ್ಯಕ್ಷತೆ ಮತ್ತು ಅದರ ಫಲಿತಾಂಶಗಳ ಕುರಿತು ಸಮಿತಿಗೆ ವಿವರಿಸಿದ್ದಾರೆ ಎಂದು ಹೇಳಿದರು.

ವಿಕಸನಗೊಳ್ಳುತ್ತಿರುವ ಜಾಗತಿಕ ಬೆಳವಣಿಗೆ ಭಾರತದ ಸ್ಥಾನದ ಬಗ್ಗೆ ಸಮಿತಿಯನ್ನು ನವೀಕರಿಸುತ್ತಿರುವುದಕ್ಕಾಗಿ ಎಂಇಎಗೆ ಧನ್ಯವಾದಗಳು ಎಂದು ಚತುರ್ವೇದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

18ನೇ ಜಿ20 ಶೃಂಗಸಭೆಯನ್ನು ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಇದು ಭಾರತ ಆಯೋಜಿಸಿದ ಮೊದಲ ಜಿ20 ಶೃಂಗಸಭೆಯಾಗಿದೆ. ಶೃಂಗಸಭೆಯ ವಿಷಯ "ವಸುಧೈವ ಕುಟುಂಬಕಂ". ಅಂದರೆ "ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ" ಎಂಬುವುದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT