ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ವಶದಲ್ಲಿರುವ ಭಾರತೀಯರ ಬಿಡುಗಡೆಗೆ ಸಕಾರಾತ್ಮಕ ಪ್ರತಿಕ್ರಿಯೆ: ಜೈ ಶಂಕರ್

Published 15 ಏಪ್ರಿಲ್ 2024, 8:01 IST
Last Updated 15 ಏಪ್ರಿಲ್ 2024, 8:01 IST
ಅಕ್ಷರ ಗಾತ್ರ

ಬೆಂಗಳೂರು: ಇರಾನ್ ವಶದಲ್ಲಿರುವ ಸರಕು ಹಡಗಿನಲ್ಲಿರುವ 17 ಮಂದಿ ಭಾರತೀಯರನ್ನು ಬಿಡುಗಡೆ ಮಾಡುವ ಸಂಬಂಧ ಆ ದೇಶದ ವಿದೇಶಾಂಗ ಸಚಿವರ ಜತೆ ಮಾತನಾಡಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಹೇಳಿದರು.

ನಮ್ಮ ಮಾತುಕತೆ ಬಳಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತದ ಆತಂಕ ಅರ್ಥವಾಗುತ್ತದೆ ಎಂದು ಇರಾನ್ ವಿದೇಶಾಂಗ ಸಚಿವರು ನನಗೆ ಹೇಳಿದರು. ಹೀಗಾಗಿ ಬಿಡುಗಡೆ ವಿಶ್ವಾಸವಿದೆ. ಭಾರತದ ಒಳಗೂ, ಹೊರಗೂ ಪ್ರತಿಯೊಬ್ಬ ಭಾರತೀಯನ ರಕ್ಷಣೆ ಮೋದಿಯವರ ಗ್ಯಾರಂಟಿ ಎಂದೂ ಹೇಳಿದರು.

ಮಧ್ಯ ಪ್ರಾಚ್ಯ ಭಾಗದಲ್ಲಿ 90 ಲಕ್ಷ ಭಾರತೀಯರು ವಾಸವಿದ್ದಾರೆ. ಅವರ ರಕ್ಷಣೆಯೇ ನಮ್ಮ ಬದ್ಧತೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳ ಸಂಪರ್ಕದಲ್ಲಿ ಇದ್ದೇವೆ , ಸಂಘರ್ಷ ಬಿಟ್ಟು ಮಾತುಕತೆಗೆ ಸಲಹೆ ನೀಡಿದ್ದೇವೆ ಎಂದು ಜೈ.ಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT