ಜಲಂಧರ್: ಇಲ್ಲಿನ ಹಲವು ಶಾಲೆಗಳಿಗೆ ಸೋಮವಾರ ಬಾಂಬ್ ಬೆದರಿಕೆ ಬಂದ ಕಾರಣದಿಂದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ, ವಿಧ್ವಂಸಕ ವಿರೋಧಿ ಕ್ರಮಗಳನ್ನು ಕೈಗೊಂಡಿದ್ದಾರೆ. ಅದಾಗ್ಯೂ, ಈವರೆಗೆ ಯಾವುದೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

‘ವಿದ್ಯುತ್ ಪೂರೈಕೆಯಲ್ಲಿ ದೋಷವಿದೆ ಎಂದು ಹೇಳಿ ನಮ್ಮ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಂತೆ ಕೇಳಲಾಯಿತು’ ಎಂದು ವರದಿಗಾರರಿಗೆ ಪೋಷಕರು ತಿಳಿಸಿದ್ದಾರೆ.

ಕೆವಿಎಂ ಶಾಲೆಯಲ್ಲಿದ್ದ ಉತ್ತರ ಎಸಿಪಿ ಸಂಜಯ್ ಕುಮಾರ್ ಮಾತನಾಡಿ, ‘ಶಾಲೆಯನ್ನು ಸ್ಪೋಟಿಸಲಾಗುವುದು ಎಂದು ಪ್ರಾಂಶುಪಾಲರ ಇ–ಮೇಲ್ಗೆ ಬೆದರಿಕೆ ಬಂದಿದೆ’ ಎಂದು ಹೇಳಿದ್ದಾರೆ.

ಮಾಹಿತಿ ಲಭ್ಯವಾದ ತಕ್ಷಣ ಶಾಲಾ ಆವರಣದಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಅಲ್ಲದೆ, ಇತರ ಶಾಲೆಗಳಿಗೆ ಕೂಡಾ ಇದೇ ರೀತಿಯ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.