ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ| ರಾಷ್ಟ್ರೀಯ ಹೆದ್ದಾರಿ–44ರ ದುರಸ್ಥಿ: 3 ದಿನ ಸಂಚಾರ ಸ್ಥಗಿತ

Last Updated 23 ಫೆಬ್ರವರಿ 2023, 9:40 IST
ಅಕ್ಷರ ಗಾತ್ರ

ಜಮ್ಮು: ದುರಸ್ಥಿ ಕಾಮಗಾರಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ, ಫೆಬ್ರುವರಿ 24, ಮಾರ್ಚ್ 3 ಮತ್ತು 10 ರಂದು ಮೂರು ದಿನ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ.

ರಸ್ತೆ ದುರಸ್ಥಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನಿರ್ದೇಶನ ನೀಡಿದೆ.

ನಶ್ರಿಯಿಂದ ನವಯುಗ ಸುರಂಗ ಮಾರ್ಗದ ನಡುವಿನ ರಾಷ್ಟ್ರೀಯ ಹೆದ್ದಾರಿ–44 ರ ದುರಸ್ಥಿ ಕಾಮಗಾರಿ ಕೆಲಸವು ಫೆಬ್ರುವರಿ 24 ರ ಬೆಳಿಗ್ಗೆ 6 ರಿಂದ ಪ್ರಾರಂಭಗೊಂಡು ಮರುದಿನ ಬೆಳಿಗ್ಗೆ 6 ರವರೆಗೆ ನಡೆಯಲಿದೆ. ಈ ವೇಳೆ ವೈದ್ಯಕೀಯ ತುರ್ತು ವಾಹನವನ್ನು ಹೊರತುಪಡಿಸಿ ಲಘು ಮೋಟಾರು ವಾಹನಗಳು ಮತ್ತು ಭಾರೀ ಮೋಟಾರು ವಾಹನಗಳ ಸಂಚಾರವನ್ನು ನಿಷೇಧಿಸಿ ಆ ದಿನವನ್ನು ಸಂಚಾರ ರಹಿತ ದಿನ ಎಂದು ಘೋಷಿಸಲಾಗಿದೆ.‌‌

ಇದೇ ರೀತಿ, ಮಾರ್ಚ್ 3 ಮತ್ತು ಮಾರ್ಚ್ 10 ರಂದು ರಾಷ್ಟ್ರೀಯ ಹೆದ್ದಾರಿ–44 ಸಂಚಾರ ರಹಿತ ದಿನ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT