ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jammu And Kashmir | 'ಸಹಜ ಸ್ಥಿತಿ ಇದೆ' ಎಂಬ ಸುಳ್ಳಿನ ಬಲೂನು ಒಡೆದಿದೆ: ಮುಫ್ತಿ

Published 5 ಆಗಸ್ಟ್ 2023, 11:49 IST
Last Updated 5 ಆಗಸ್ಟ್ 2023, 11:49 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಇದೆ ಎಂದು ಲೆಫ್ಟಿನಂಟ್‌ ಗೌವರ್ನರ್‌ ಮನೋಜ್ ಸಿನ್ಹಾ ಅವರು ಹೇಳುತ್ತಿರುವ 'ಸುಳ್ಳಿನ ಬಲೂನು' ಒಡೆದಿದೆ ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಮುಫ್ತಿ, ಲೆಫ್ಟಿನಂಟ್‌ ಗೌವರ್ನರ್‌ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಇದೆ ಎಂದು ಹೇಳಿರುವುದಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದ ಪಿಡಿಪಿ ಸದಸ್ಯನನ್ನು ಪೊಲೀಸರು ಎಳೆದೊಯ್ದಿದ್ದಾರೆ. ಇದು ಮನೋಜ್‌ ಸಿನ್ಹಾ ಅವರ 'ಸಹಜ ಸ್ಥಿತಿ ಎಂಬ ಸುಳ್ಳಿನ ಬಲೂನ್‌' ಅನ್ನು ಒಡೆದುಹಾಕಿದೆ. ಪಿಡಿಪಿಯು ಜಮ್ಮು ಮತ್ತು ಕಾಶ್ಮೀರದ ಹಕ್ಕುಗಳು ಮತ್ತು ಜನರ ಘನತೆಯ ರಕ್ಷಣೆಗಾಗಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರ ಹಿಂಪಡೆದ ನಾಲ್ಕನೇ ವರ್ಷಾಚರಣೆ ವೇಳೆ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದೂ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಪಿಡಿಪಿಯ ಹಿರಿಯ ನಾಯಕರೊಂದಿಗೆ ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ನನ್ನ ಪಕ್ಷದ ಹಲವರನ್ನು ಮಧ್ಯರಾತ್ರಿ ಪೊಲೀಸ್‌ ಠಾಣೆಗಳಲ್ಲಿ ಕಾನೂನುಬಾಹಿರವಾಗಿ ಬಂಧಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಭಾರತ ಸರ್ಕಾರವು ಕಾಶ್ಮೀರದಲ್ಲಿ ಸಹಜ ಸ್ಥಿತಿ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಭ್ರಮೆಗಳನ್ನು ಬಿತ್ತುವ ಕೆಲಸ ಮಾಡುತ್ತಿರುವುದು ಇದರಿಂದ ಬಹಿರಂಗವಾಗಿದೆ' ಎಂದಿದ್ದಾರೆ.

ಇದನ್ನೂ ಓದಿ: Jammu And Kashmir | ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಜನರ ಬದುಕು ಬದಲಾಗಿದೆ: ಸಿನ್ಹಾ

ಮತ್ತೊಂದು ಟ್ವೀಟ್‌ನಲ್ಲಿ, ಒಂದೆಡೆ, ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನವನ್ನು ಅಕ್ರಮವಾಗಿ ಹಿಂಪಡೆದಿರುವುದನ್ನು ಆಚರಿಸುವಂತೆ ಕಾಶ್ಮೀರಿಗಳಿಗೆ ಕರೆ ನೀಡುವ ದೊಡ್ಡದೊಡ್ಡ ಜಾಹೀರಾತು ಫಲಕಗಳನ್ನು ಹಾಕಲಾಗಿದೆ. ಮತ್ತೊಂದೆಡೆ, ಜನರ ನಿಜವಾದ ಭಾವನೆಗಳನ್ನು ಉಸಿರುಗಟ್ಟಿಸಲು ವಿವೇಚನಾರಹಿತ ಶಕ್ತಿಗಳನ್ನು ಬಳಸಲಾಗುತ್ತಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್‌, ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಬೆಳವಣಿಗೆಗಳನ್ನು ಪರಿಗಣಿಸುವ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT