ಶ್ರೀನಗರ: ‘ಜೈಶ್ ಎ ಮೊಹಮ್ಮದ್’ ಮತ್ತು ‘ಅನ್ಸರ್ ಘಜ್ವತ್-ಉಲ್-ಹಿಂದ್’ ಸಂಘಟನೆಗಳ ಏಳು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು (ಸೋಮವಾರ) ಬಂಧಿಸಿದ್ದಾರೆ.

ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಜೈಶ್ ಎ ಮೊಹಮ್ಮದ್ ಮತ್ತು ಅನ್ಸರ್ ಘಜ್ಜತ್ ಹಿಂದ್ ಸಂಘಟನೆಗಳ ಉಗ್ರರನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ಪೈಕಿ ಇಬ್ಬರು ವೈದ್ಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫರಿದಾಬಾದ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಈ ಕಾರ್ಯಾಚರಣೆಯನ್ನು ನಡೆಸಿದ್ದು, 2,900 ಕೆ.ಜಿ ಐಇಡಿ ತಯಾರಿಸುವ ಸಾಮಗ್ರಿಗಳು, ಇತರೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ದೋಣಿಯಲ್ಲೇ ಚಹಾ ಅಂಗಡಿ ತೆರೆದ ವೃದ್ಧೆ; ನೆಟ್ಟಿಗರ ಮೆಚ್ಚುಗೆ.ಮಸ್ಕಿ: ಅವ್ಯವಹಾರ– ತಲೇಖಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮ್ಮವ್ವ ಸದಸ್ಯತ್ವ ರದ್ದು.
ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೆಇಎಂ ಮತ್ತು ಎಜಿಯುಎಚ್ನೊಂದಿಗೆ ಸಂಬಂಧ ಹೊಂದಿರುವ ಉಗ್ರರನ್ನು ಪತ್ತೆಹಚ್ಚಿದ್ದೇವೆ. ನಗರದ ವಿವಿಧ ಸ್ಥಳಗಳಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಬೆದರಿಕೆ ಹಾಕುವ ಪೋಸ್ಟರ್ಗಳನ್ನು ಕಳೆದ ತಿಂಗಳಿನಲ್ಲಿ ಅಂಟಿಸಿದ್ದರು. ತನಿಖೆಯ ವೇಳೆ ಪಾಕಿಸ್ತಾನದ ಇತರೆ ದೇಶಗಳಿಂದ ಭೂಗತ ಪಾತಕಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಶ್ರೀನಗರದ ನೌಗಾಮ್ ನಿವಾಸಿಗಳಾದ ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್, ಯಾಸಿರ್-ಉಲ್-ಅಶ್ರಫ್ ಮತ್ತು ಮಕ್ಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹಿದ್, ಪುಲ್ವಾಮಾದ ಕೊಯಿಲ್ ಪ್ರದೇಶದ ನಿವಾಸಿ ಮುಜಮ್ಮಿಲ್ ಅಹ್ಮದ್ ಗನೈ ಅಲಿಯಾಸ್ ಮುಸೈಬ್, ಕುಲ್ಗಾಮ್ನ ವಾನ್ಪೋರಾ ಪ್ರದೇಶದ ನಿವಾಸಿ ಅದೀಲ್ ಸೇರಿದಂತೆ ಏಳು ಮಂದಿ ಉಗ್ರರನ್ನು ಬಂಧಿಸಿದ್ದೇವೆ ಪೊಲೀಸರು ಹೇಳಿದ್ದಾರೆ.
.ನಗುವ ನಯನ ಮಧುರ ಮೌನ : ರಾಜೇಶ್ ಕೃಷ್ಣನ್ ಕಂಠಕ್ಕೆ ವಿದೇಶಿಗರ ಮೆಚ್ಚುಗೆ.ಬೀದರ್ | KSRTC ಬಸ್ ಸ್ಟ್ಯಾಂಡ್ ಯಾಕಿಷ್ಟು ಹೊಲಸು?: ನಾಗಲಕ್ಷ್ಮೀ ಚೌಧರಿ .
ಬಂಧಿತರಿಂದ ಎಲೆಕ್ಟ್ರಾನಿಕ್ ಸಾಧನಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಐಇಡಿ ತಯಾರಿಕೆ ಸಾಮಗ್ರಿಗಳು, ಎಕೆ 56 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಚುನಾವಣಾ ಆಯೋಗದ SIR ಅಂದರೆ ಡಿಎಂಕೆಗೆ ಏಕಷ್ಟು ಭಯ: AIADMKಯ ಪಳನಿಸ್ವಾಮಿ ಪ್ರಶ್ನೆ.ಶಿಕ್ಷಣ ಸೂಚ್ಯಂಕದಲ್ಲಿ 7ರಿಂದ 14ನೇ ಸ್ಥಾನಕ್ಕೆ ಕುಸಿದ ಮೈಸೂರು: ಸಿಎಂ ಅಸಮಾಧಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.