ಯಮುನಾ ನದಿ ನೀರಿನ ಮಟ್ಟ ಇಳಿಕೆ
ನವದೆಹಲಿಯ ಹಳೆಯ ರೈಲ್ವೆಸೇತುವೆ ಸಮೀಪ ಯಮುನಾ ನದಿಯ ನೀರಿನ ಮಟ್ಟ ಭಾನುವಾರ 205.56 ಮೀಟರ್‌ಗೆ ತಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದರು. ನಗರದಲ್ಲಿ ನದಿಯ ನೀರು 204.50 ಮೀಟರ್ ತಲುಪಿದಾಗ ಎಚ್ಚರಿಕೆ ನೀಡಲಾಗುತ್ತಿದೆ. 205.33 ಮೀಟರ್ ಅಪಾಯಕಾರಿ ಮಟ್ಟವಾಗಿದ್ದು 206 ಮೀಟರ್‌ಗೆ ಏರಿದ ನಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ. ತಗ್ಗು ಪ್ರದೇಶಗಳ ಜನರಿಗಾಗಿ ದೆಹಲಿ–ಮೇರಠ್ ಎಕ್ಸ್‌ಪ್ರೆಸ್ ವೇ ಮತ್ತು ಮಯೂರ್ ವಿಹಾರ್ ಪ್ರದೇಶದಲ್ಲಿ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಲಾಗಿದೆ.